ಚಂಡೀಗಢ್ (ಪಂಜಾಬ್):ವಂದೇ ಭಾರತ್ ರೈಲು ಡಿಕ್ಕಿಯಾಗಿ ಮೂರು ವರ್ಷದ ಬಾಲಕಿ ಸಾವಿಗೀಡಾದ ಘಟನೆ ಪಂಜಾಬ್ನ ರೂಪನಗರ ಜಿಲ್ಲೆಯಲ್ಲಿ ನಡೆಯಿತು. ಇಲ್ಲಿನ ಕಿರಾತಪುರ ಸಾಹಿಬ್ ಸಮೀಪ ಮಂಗಳವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ದುರ್ಘಟನೆ ಸಂಭವಿಸಿದೆ.
ಬಾಲಕಿಯ ಕುಟುಂಬಸ್ಥರು ಕೆಲಸಕ್ಕೆ ಹೋಗುತ್ತಿದ್ದರು. ಮಗು ಕೂಡಾ ಕುಟುಂಬಸ್ಥರನ್ನು ಹಿಂಬಾಲಿಸಿ ಹೋಗುತ್ತಿದ್ದಳು. ರೈಲ್ವೆ ಹಳಿ ದಾಟುವಾಗ ಉನಾ ಮತ್ತು ದೆಹಲಿ ನಡುವೆ ಸಂಚರಿಸುತ್ತಿದ್ದ ರೈಲಿಗೆ ಸಿಲುಕಿ ಬಾಲಕಿ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಪ್ರಾಣಿಗಳಿಂದ ಅಪಘಾತ ತಡೆಗೆ ಕ್ರಮ: ರೈಲು ಹಳಿ ಸುತ್ತ 1,000 ಕಿ.ಮೀ ಆವರಣ ಗೋಡೆ ನಿರ್ಮಾಣ