ಚಂಡೀಗಢ (ಪಂಜಾಬ್) : ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಪಂಜಾಬ್‌ನಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗುತ್ತಿದೆ. ಇದರ ಬೆನ್ನಲ್ಲೇ ರಾಜ್ಯದ ಗುರುದಾಸ್‌ಪುರ ಜಿಲ್ಲೆಯಲ್ಲಿ ಪೊಲೀಸರು ಶುಕ್ರವಾರ ದೀನಾನಗರ ವಿಧಾನಸಭಾ ಕ್ಷೇತ್ರದಿಂದ ಸುಮಾರು 2 ಕೆಜಿ ಆರ್‌ಡಿಎಕ್ಸ್ ಮತ್ತು ಇತರೆ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಪಂಜಾಬ್‌ನ ಹಲವೆಡೆ ಸ್ಫೋಟಕ ವಸ್ತುಗಳು ಇತ್ತೀಚೆಗೆ ಪತ್ತೆಯಾಗುತ್ತಿವೆ. ಪರಿಣಾಮ ಭದ್ರತಾ ಏಜೆನ್ಸಿಗಳು ರಾಜ್ಯದ ಭದ್ರತೆಗೆ ಸಂಬಂಧಿಸಿದಂತೆ ನಿರಂತರವಾಗಿ ಹೆಚ್ಚು ಜಾಗರೂಕರಾಗಿದ್ದಾರೆ. ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯಲ್ಲಿ ಲೋಪವಾಗಿರುವ ವಿಚಾರವೂ ಚರ್ಚೆಗೆ ಗ್ರಾಸವಾಗಿತ್ತು.
ಭದ್ರತೆಯ ವಿಷಯದಲ್ಲಿ ಪಂಜಾಬ್ ಇತ್ತೀಚಿನ ದಿನಗಳಲ್ಲಿ ಅತ್ಯಂತ ಸೂಕ್ಷ್ಮ ರಾಜ್ಯವಾಗಿದೆ. ಪಂಜಾಬ್ ಪೊಲೀಸರು ಮೊನ್ನೆಯಷ್ಟೇ ಅಂದರೆ ಸೋಮವಾರ ರಾಜ್ಯದ ಫಜಿಲ್ಕಾ ಜಿಲ್ಲೆಯ ಗಡಿ ಗ್ರಾಮದಿಂದ ಹ್ಯಾಂಡ್ ಗ್ರೆನೇಡ್ ಅನ್ನು ವಶಪಡಿಸಿಕೊಂಡಿದ್ದರು. ಈ ಗ್ರಾಮವು ಭಾರತ-ಪಾಕಿಸ್ತಾನದ ಅಂತಾರಾಷ್ಟ್ರೀಯ ಗಡಿಯಲ್ಲಿದೆ. ಇದೀಗ ದೀನಾನಗರ ವಿಧಾನಸಭಾ ಕ್ಷೇತ್ರದಿಂದ ಸುಮಾರು 2 ಕೆಜಿ ಆರ್‌ಡಿಎಕ್ಸ್ ಮತ್ತು ಗ್ರೆನೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದೇ ನಗರದಲ್ಲಿ ಹಿಂದಿನ ದಿನವೂ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ.