ಚಂಡೀಗಢ:ಜರ್ಮನಿಯಲ್ಲಿ ಮುಂದಿನ ತಿಂಗಳು ನಡೆಯುವ ವಿಜ್ಞಾನ ಎಕ್ಸ್ಪೋದಲ್ಲಿ ಭಾರತದ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಇವರಿಬ್ಬರು ವಿಜ್ಞಾನ ಸಮ್ಮೇಳನದಲ್ಲಿ ಭಾಗವಹಿಸಿ ಅವರ ಪ್ರತಿಭೆಯನ್ನು ಪ್ರದರ್ಶನ ಮಾಡಲಿದ್ದಾರೆ. ಇಬ್ಬರಲ್ಲಿ ಒಬ್ಬ ಪಂಜಾಬ್ ಮೂಲದ ಎಸ್ಡಿ ಕಾಲೇಜು ವಿದ್ಯಾರ್ಥಿಯಾಗಿದ್ದಾರೆ.
ಜರ್ಮನಿಯ ಜೂಲಿಚ್ ನಗರದಲ್ಲಿ ಅಕ್ಟೋಬರ್ 4 ರಿಂದ ಅಕ್ಟೋಬರ್ 7 ರವರೆಗೆ ವಿಜ್ಞಾನ ಎಕ್ಸ್ಪೋ ನಡೆಯಲಿದ್ದು, ಪ್ಲಂಬರ್ ಕೆಲಸ ಮಾಡುವ ವ್ಯಕ್ತಿಯ ಪುತ್ರ ನಿಖಿಲ್ ಎಂಬುವವರು ಆಯ್ಕೆಯಾಗಿದ್ದಾರೆ. ನಿಖಿಲ್ರ ಈ ಸಾಧನೆಗೆ ಕುಟುಂಬ ಹಾಗೂ ಕಾಲೇಜು ಸಂತಸ ವ್ಯಕ್ತಪಡಿಸಿದೆ.
ಕಾಲೇಜಿನಿಂದಲೇ ಹಣದ ವ್ಯವಸ್ಥೆ:ವಿಜ್ಞಾನ ಎಕ್ಸ್ಪೋಗೆ ಆಯ್ಕೆಯಾದ ವಿದ್ಯಾರ್ಥಿಗೆ ಆರ್ಥಿಕ ಸಮಸ್ಯೆ ಇರುವ ಕಾರಣ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಯ ಜರ್ಮನಿ ಪ್ರವಾಸದ ಖರ್ಚು ವಹಿಸಿಕೊಂಡಿದೆ. ತಮ್ಮ ಕಾಲೇಜಿನ ವಿದ್ಯಾರ್ಥಿ ವಿದೇಶದ ವಿಜ್ಞಾನ ಸಮ್ಮೇಳನಕ್ಕೆ ಆಯ್ಕೆಯಾಗಿದ್ದು ಹೆಮ್ಮೆಯ ವಿಷಯವಾಗಿದೆ ಎಂದು ಕಾಲೇಜು ತಿಳಿಸಿದೆ.
ಸಂಶೋಧನೆ ಮಾಡುವ ಆಸೆ:ಬಡತನದಲ್ಲೂ ಅರಳಿದ ಪ್ರತಿಭೆಯಾದ ನಿಖಿಲ್ ತಾನು ಮುಂದೆ ಉನ್ನತ ವ್ಯಾಸಂಗ ಮಾಡಿ ಪಿಎಚ್ಡಿ ಮಾಡಬೇಕು ಎಂಬ ಆಸೆ ಹೊಂದಿದ್ದಾನೆ. ಸರ್ಕಾರದ ಸ್ಕಾಲರ್‌ಶಿಪ್ ಪಡೆದು ಭೌತಶಾಸ್ತ್ರದಲ್ಲಿ ಸಂಶೋಧನಾ ಕೈಗೊಳ್ಳುವ ಗುರಿ ಹಾಕಿಕೊಂಡಿದ್ದಾನೆ.
ಓದಿ:ಎಸಿಪಿ ರೀನಾ ಸುವರ್ಣ ಹೆಸರು ಹೇಳಿ ಸುಲಿಗೆ: ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಅರೆಸ್ಟ್