ಚಂಡೀಗಢ(ಪಂಜಾಬ್): ಆಮ್ ಆದ್ಮಿ ಪಕ್ಷದ ಭಗವಂತ್ ಮಾನ್ ಮಾರ್ಚ್ 16ರಂದು ಪಂಜಾಬ್ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದು, ಅದಕ್ಕಾಗಿ ಅದ್ಧೂರಿ ವೇದಿಕೆ ಸಿದ್ಧಗೊಳ್ಳುತ್ತಿದೆ.
ಸ್ವಾಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಹುಟ್ಟೂರು ಖಟಕಡಕಲಾನ್ನಲ್ಲಿ ಮಾರ್ಚ್ 16ರಂದು ಪಂಜಾಬ್ನ 17ನೇ ಸಿಎಂ ಆಗಿ ಭಗವಂತ್ ಮಾನ್ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಅದಕ್ಕಾಗಿ ಭರ್ಜರಿ ತಯಾರಿ ನಡೆದಿದ್ದು, 100 ಎಕರೆ ಜಮೀನಿನಲ್ಲಿ ಕಾರ್ಯಕ್ರಮ ಆಯೋಜನೆಗೊಳ್ಳಲಿದೆ.
ಪದಗ್ರಹಣ ಕಾರ್ಯಕ್ರಮದಲ್ಲಿ 4-5 ಲಕ್ಷ ಜನರು ಆಗಮಿಸುವ ಸಾಧ್ಯತೆ ಇರುವ ಕಾರಣ ಎಲ್ಲರಿಗೂ ಆಸನದ ವ್ಯವಸ್ಥೆ ಮಾಡಲಾಗಿದ್ದು, 50 ಎಕರೆ ಜಮೀನಿನಲ್ಲಿ ಪಾರ್ಕಿಂಗ್ ವ್ಯವಸ್ಥೆ ಇದೆ ಎಂದು ಪಂಜಾಬ್ನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎ ವೇಣು ಪ್ರಸಾದ್ ತಿಳಿಸಿದ್ದಾರೆ.
ಇದನ್ನೂ ಓದಿರಿ:ನಿಮ್ಮ ಮಗನನ್ನು ನಂಬಿ ಮತ ಹಾಕಿದ್ದಕ್ಕೆ ಧನ್ಯವಾದ.. ಸಂಸದ ಸ್ಥಾನಕ್ಕೆ ಮಾನ್ ರಾಜೀನಾಮೆ
ಸಂಸದ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿರುವ ಭಗವಂತ್ ಮಾನ್ ಅವರು, ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಭಾಗಿಯಾಗುವಂತೆ ಆಹ್ವಾನ ನೀಡಿದ್ದು, ನಿಮ್ಮ ಸೋದರನನ್ನು ಹರಿಸಲು ಎಲ್ಲರೂ ಖಟಕಡಕಲಾನ್ಗೆ ಬನ್ನಿ ಎಂದಿದ್ದಾರೆ. 117 ಕ್ಷೇತ್ರಗಳ ಪಂಜಾಬ್ನಲ್ಲಿ ಆಮ್ ಆದ್ಮಿ ಪಕ್ಷ 92 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.