ಚಂಡೀಗಢ(ಪಂಜಾಬ್): ಕೊರೊನಾ ಹಾವಳಿ ದೇಶವನ್ನೇ ಬೆಚ್ಚಿ ಬೀಳಿಸುತ್ತಿರುವ ಈ ವೇಳೆ ಪಂಜಾಬ್ನಲ್ಲಿ ರಾಜಕೀಯ ಬಿಕ್ಕಟ್ಟು ಆರಂಭಕ್ಕೆ ಮುನ್ನುಡಿ ಶುರುವಾಗಿದೆ. ಕ್ಯಾಬಿನೆಟ್ ಸಭೆಯ ವೇಳೆ ಕೋಲಾಹಲ ನಡೆದಿದ್ದು, ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಕೋಟ್ಕಾಪುರ ಫೈರಿಂಗ್ ಕೇಸ್ ಕೋಲಾಹಲಕ್ಕೆ ಕಾರಣವಾಗಿದ್ದು, ರಾಜ್ಯ ಹೈಕೋರ್ಟ್ ವಿಶೇಷ ತನಿಖಾ ದಳದ ವರದಿಯನ್ನು ತಳ್ಳಿ ಹಾಕಿದ ನಂತರ ಹೊಸ ಎಸ್ಐಟಿಯನ್ನು ರಚಿಸಲು ಕ್ಯಾಬಿನೆಟ್ನಲ್ಲಿ ಅನುಮತಿ ನೀಡಲಾಗಿದೆ.
ಈ ವಿಚಾರವಾಗಿ ಪಂಜಾಬ್ ಪ್ರದೇಶ ಕಾಂಗ್ರೆಸ್ ಕಮಿಟಿಯ ಮುಖ್ಯಸ್ಥರಾದ ಸುನಿಲ್ ಜಾಕರ್ ಮತ್ತು ಕ್ಯಾಬಿನೆಟ್ ಸಚಿವ ಸುಖ್ವಿಂದರ್ ಸಿಂಗ್ ರಾಂಧಾವಾ ರಾಜೀನಾಮೆ ಸಲ್ಲಿಸಿದ್ದು, ಈ ರಾಜೀನಾಮೆಯನ್ನು ಒಪ್ಪಿಕೊಳ್ಳಲು ಕ್ಯಾಪ್ಟನ್ ಅಮರೀಂದರ್ ಸಿಂಗ್ ನಿರಾಕರಿಸಿದ್ದಾರೆ.