ಚಂಡೀಗಢ:ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಸ್ವಿಂದರ್ ಧಿಮಾನ್ ಅವರನ್ನು ಸೋಲಿಸುವ ಮೂಲಕ ಆಮ್ ಆದ್ಮಿ ಪಕ್ಷದ ಹಾಲಿ ಶಾಸಕ ಅಮನ್ ಅರೋರಾ ಭಾರಿ ಅಂತರದ ಗೆಲುವು ಸಾಧಿಸಿದ್ದಾರೆ. ಅರೋರಾ 75,277 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇನ್ನು ಎಎಪಿಯ ರಾಮನ್ ಅರೋರಾ ಅವರು ಜಲಂಧರ್ ಸೆಂಟ್ರಲ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ರಾಜಿಂದರ್ ಬೆರಿ ಅವರನ್ನು 247 ಮತಗಳ ಅಂತರದಿಂದ ಸೋಲಿಸಿದ್ದಾರೆ.
13 ಮಹಿಳೆಯರಿಗೆ ಮಣೆ ಹಾಕಿದ ಪಂಜಾಬ್ ಮತದಾರ.. ಅಮನ್ ಅರೋರಾಗೆ 75 ಸಾವಿರ ಮತಗಳ ಅಂತರದ ಗೆಲುವು - ಆಮ್ ಆದ್ಮಿ ಪಕ್ಷದ ಹಾಲಿ ಶಾಸಕ ಅಮನ್ ಅರೋರಾ
Punjab polls: ಸುನಮ್‌ನಿಂದ ಆಮ್ ಆದ್ಮಿ ಪಕ್ಷದ ಹಾಲಿ ಶಾಸಕ ಅಮನ್ ಅರೋರಾ ಕಾಂಗ್ರೆಸ್ ಅಭ್ಯರ್ಥಿ ಜಸ್ವಿಂದರ್ ಧಿಮಾನ್ ಅವರನ್ನು ಸೋಲಿಸುವ ಮೂಲಕ ಭಾರಿ ಅಂತರದ ಗೆಲುವು ಸಾಧಿಸಿದ್ದಾರೆ.
ಪಂಜಾಬ್ ಚುನಾವಣೆ ಫಲಿತಾಂಶ
ಆಮ್ ಆದ್ಮಿ ಪಕ್ಷ (ಎಎಪಿ) ಪಂಜಾಬ್‌ನಲ್ಲಿ 117 ವಿಧಾನಸಭಾ ಸ್ಥಾನಗಳಲ್ಲಿ 92 ಸ್ಥಾನಗಳನ್ನು ಪಡೆಯುವ ಮೂಲಕ ಅಧಿಕಾರಕ್ಕೆ ಬಂದಿದೆ. ಇದರೊಂದಿಗೆ ಪಂಜಾಬ್ ಚುನಾವಣೆಗೆ ಸ್ಪರ್ಧಿಸಿದ್ದ 93 ಮಹಿಳೆಯರಲ್ಲಿ 13 ಮಂದಿ ಜಯಗಳಿಸಿದ್ದು, 11 ಮಂದಿ ಆಮ್ ಆದ್ಮಿ ಪಕ್ಷಕ್ಕೆ ಸೇರಿದವರಾಗಿದ್ದಾರೆ.
ಇದನ್ನೂ ಓದಿ:ದೆಹಲಿ ನಂತರ ಪಂಜಾಬ್ನಲ್ಲೂ 'ಆಪ್'ಗೆ ಪ್ರಚಂಡ ಗೆಲುವು: ಸಿಖ್ಖರ 'ಮನ್' ಗೆದ್ದಿದ್ದೇಗೆ?