ಕರ್ನಾಟಕ

karnataka

ETV Bharat / bharat

ಗುರುದ್ವಾರ ಅಪವಿತ್ರ ಮಾಡಿದ ಶಂಕೆ: ವ್ಯಕ್ತಿಯನ್ನು ಕೊಂದ ನಿಹಾಂಗ್​ ಸಿಖ್​​, ಬಂಧನ - Phagwara gurudwara

ಪಂಜಾಬ್​ನ ಜಲಂಧರ್​ನ ಫಗ್ವಾರದ ಗುರುದ್ವಾರದಲ್ಲಿ ವ್ಯಕ್ತಿಯನ್ನು ನರಬಲಿ ನೀಡಲಾಗಿದೆ.

ಗುರುದ್ವಾರ ವ್ಯಕ್ತಿ ಹತ್ಯೆ
ಗುರುದ್ವಾರ ವ್ಯಕ್ತಿ ಹತ್ಯೆ

By ETV Bharat Karnataka Team

Published : Jan 16, 2024, 8:27 PM IST

ಜಲಂಧರ್​ (ಪಂಜಾಬ್​):ಇಲ್ಲಿನ ಚೌರಾ ಖೂಹ್ ಗುರುದ್ವಾರವನ್ನು ಅಪವಿತ್ರ ಮಾಡಲು ಬಂದಿದ್ದಾನೆ ಎಂದು ಶಂಕಿಸಿ ವ್ಯಕ್ತಿಯೊಬ್ಬನನ್ನು ನಿಹಾಂಗ್​ ಸಿಖ್​ ಹತ್ಯೆ ಮಾಡಿದ್ದಾನೆ. ಇದನ್ನು ವಿಡಿಯೋ ಮಾಡಿ ಹಂಚಿಕೊಳ್ಳಲಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ರಮಣದೀಪ್​ ಸಿಂಗ್​ ಬಂಧಿತ ನಿಹಾಂಗ್​ ಸಿಖ್​.

ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಸೋಮವಾರ ರಾತ್ರಿ 10 ಗಂಟೆ ಸುಮಾರಿನಲ್ಲಿ ವ್ಯಕ್ತಿಯೊಬ್ಬ ಗುರುದ್ವಾರ ಪ್ರವೇಶಿಸಿ ಅಲ್ಲಿನ ಶೌಚಾಲಯಕ್ಕೆ ತೆರಳಿದ್ದಾನೆ. ತುಂಬಾ ಸಮಯ ಕಳೆದರೂ ಆತ ಹೊರಬಂದಿಲ್ಲ. ಗುರುದ್ವಾರದ ಪಾಲಕರು ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ವ್ಯಕ್ತಿ ಅಲ್ಲಿರುವುದನ್ನು ಕಂಡಿದ್ದಾರೆ. ಬಳಿಕ ಆತನನ್ನು ಅಲ್ಲಿಂದ ಹೊರಬರಲು ಸೂಚಿಸಿದ್ದಾರೆ. ಆದರೆ, ಆ ವ್ಯಕ್ತಿ ಹೊರಬರಲು ನಿರಾಕರಿಸಿದ್ದಾನೆ. ಕೊನೆಗೆ ಅಲ್ಲಿನ ಸಿಬ್ಬಂದಿ ವ್ಯಕ್ತಿಯನ್ನು ಹೊರಗೆ ಕರೆತಂದಿದ್ದಾರೆ.

ಗುರುದ್ವಾರದಲ್ಲಿದ್ದ ನಿಹಾಂಗ್​ ಸಿಖ್ ಕಾರ್ಯಕರ್ತರು ಆತನನ್ನು ವಿಚಾರಣೆ ಮಾಡಿದ್ದಾರೆ. ಪವಿತ್ರ ಸ್ಥಳವನ್ನು ಅಪವಿತ್ರ ಮಾಡಲು ಬಂದಿದ್ದಾಗಿ ಭಾವಿಸಿ, ಅಲ್ಲಿದ್ದ ನಿಹಾಂಗ್​ ಸಿಖ್ ರಮಣದೀಪ್​ ಸಿಂಗ್​ ವ್ಯಕ್ತಿಯನ್ನು ತನ್ನಲ್ಲಿದ್ದ ಹರಿತವಾದ ವಸ್ತುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.

ಕೊಂದ ಬಳಿಕ ವಿಡಿಯೋ ರೆಕಾರ್ಡ್​;ಇನ್ನೂ, ಅಪರಿಚಿತ ವ್ಯಕ್ತಿಯನ್ನು ಕೊಂದ ಬಳಿಕ ವಿಡಿಯೋ ಮಾಡಿ ಹರಿಬಿಡಲಾಗಿದೆ. ಪವಿತ್ರ ಗುರುದ್ವಾರದಲ್ಲಿ ಕೆಟ್ಟ ಕೆಲಸಗಳನ್ನು ಮಾಡಿ ಅಪವಿತ್ರಗೊಳಿಸಲು ಬಂದಿದ್ದ ವ್ಯಕ್ತಿಯನ್ನು 'ಬಲಿ' ನೀಡಲಾಗಿದೆ. ಯಾರೋ ಈತನನ್ನು ಇಲ್ಲಿಗೆ ಕಳುಹಿಸಿದ್ದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ. ಹೀಗಾಗಿ ಈತನನ್ನು ಗುರುವಿನ ಬಳಿಗೆ ಕಳುಹಿಸಲಾಗಿದೆ ಎಂದು ಅದರಲ್ಲಿ ಹೇಳಲಾಗಿದೆ. ಘಟನೆಯ ಬಗ್ಗೆ ಅಲ್ಲಿನ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಬಂದ ಪೊಲೀಸರು, ನಿಹಾಂಗ್ ಸಿಖ್​ ರಮಣದೀಪ್​ನನ್ನು ಬಂಧಿಸಿದ್ದಾರೆ.

ಪೊಲೀಸರು ಹತ್ಯೆ ಮಾಡಿದ ನಿಹಾಂಗ್​ ಸಿಖ್​ ವಿರುದ್ಧ ಐಪಿಸಿಯ ಸೆಕ್ಷನ್ 295 ಎ, 304 ಕಲಂನಡಿ 'ನರಹತ್ಯೆ' ಪ್ರಕರಣ ದಾಖಲಿಸಿದ್ದಾರೆ. ಮೃತ ವ್ಯಕ್ತಿಯ ದಾಳಿಯಿಂದ ಆತ್ಮರಕ್ಷಣೆಗಾಗಿ ಹತ್ಯೆ ಮಾಡಲಾಯಿತು ಎಂದು ಕೊಲೆ ಆರೋಪಿ ನಿಹಾಂಗ್ ಸಿಖ್​ನ ಸಹಚರರು ಹೇಳಿದ್ದಾರೆ.

ಯಾರು ಈ ನಿಹಾಂಗ್​ ಸಿಖ್ಖರು:ನಿಹಾಂಗ್ ಸಿಖ್ಖರು ಕಡು ನೀಲಿ ಬಣ್ಣದ ಬಟ್ಟೆ ಮತ್ತು ಪೇಟಗಳನ್ನು ಧರಿಸುತ್ತಾರೆ. ಕಠಾರಿಗಳು, ಬಂದೂಕು ಮತ್ತಿತರ ಆಯುಧಗಳನ್ನು ಅವರು ಜೊತೆಯಲ್ಲಿ ಹೊಂದಿರುತ್ತಾರೆ. ಅವರು ತಮ್ಮನ್ನು ಗುರು ಕೀ ಫೌಜ್ (ಗುರುವಿನ ಸೈನಿಕ) ಎಂದು ಪರಿಗಣಿಸುತ್ತಾರೆ. ಇವರು ಗುರುದ್ವಾರಗಳನ್ನು ಕಾಯುತ್ತಾರೆ.

ಇದನ್ನೂ ಓದಿ:'ಸಿಖ್ಖರು ಸನಾತನ ಧರ್ಮದ ಸೇನೆ'.. ಬಾಬಾ ಬಾಗೇಶ್ವರ್ ಹೇಳಿಕೆಗೆ ಎಸ್​ಜಿಪಿಸಿ ಆಕ್ಷೇಪ

ABOUT THE AUTHOR

...view details