ಕರ್ನಾಟಕ

karnataka

ETV Bharat / bharat

ಬೈಕ್‌ನ ಇಂಧನ ಟ್ಯಾಂಕ್ ಸ್ಫೋಟ: ಸವಾರನಿಗೆ ತೀವ್ರ ಗಾಯ, ಜೊತೆ ಬರುತ್ತಿದ್ದವ ಎಸ್ಕೇಪ್​ - fuel tank blast

ಪಂಜಾಬ್‌ನ ಜಲಾಲಾಬಾದ್ ಜಿಲ್ಲೆಯ ಬೈಕ್ ಸವಾರನೊಬ್ಬ ಬೈಕ್‌ನ ಇಂಧನ ಟ್ಯಾಂಕ್‌ ಸ್ಫೋಟಗೊಂಡ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದಾನೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೈಕ್‌ನ ಇಂಧನ ಟ್ಯಾಂಕ್ ಸ್ಫೋಟ
ಬೈಕ್‌ನ ಇಂಧನ ಟ್ಯಾಂಕ್ ಸ್ಫೋಟ

By

Published : Sep 16, 2021, 8:56 AM IST

ಜಲಾಲಾಬಾದ್ (ಪಂಜಾಬ್):ಪಂಜಾಬ್‌ನ ಜಲಾಲಾಬಾದ್ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಬೈಕ್‌ನ ಇಂಧನ ಟ್ಯಾಂಕ್ ಸ್ಫೋಟಗೊಂಡ ಪರಿಣಾಮ ಬೈಕ್ ಸವಾರ ತೀವ್ರವಾಗಿ ಗಾಯಗೊಂಡಿದ್ದಾನೆ.

ಬೈಕ್​ ಸವಾರನಿಗೆ 22 ವರ್ಷ ವಯಸ್ಸಾಗಿದ್ದು, ಆತನ ಸಂಬಂಧಿಕರ ಮನೆಯಿಂದ ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದ ತಕ್ಷಣ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಬೈಕ್‌ನ ಇಂಧನ ಟ್ಯಾಂಕ್ ಸ್ಫೋಟ

ಆತನ ಸಹೋದರ ಸಂಬಂಧಿ ಕೂಡ ಆತನೊಂದಿಗೆ ಬೇರೆ ಬೈಕ್​ನಲ್ಲಿ ಪ್ರಯಾಣ ಬೆಳೆಸಿದ್ದನು. ಆದರೆ, ಅಪಘಾತದ ನಂತರ ಆತ ಬೈಕ್​ ಬಿಟ್ಟು ನಾಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ. ವಿಧಿವಿಜ್ಞಾನ ತಂಡ ಘಟನೆ ಬಗ್ಗೆ ತನಿಖೆ ಕೈಗೊಂಡಿದೆ. ಅಪಘಾತದ ಹಿಂದಿನ ನಿಜವಾದ ಕಾರಣವನ್ನು ಬಹಿರಂಗಪಡಿಸುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details