ಹೋಶಿಯಾರ್‌ಪುರ (ಪಂಜಾಬ್): ವೈದ್ಯೋ ನಾರಾಯಣೋ ಹರಿಃ ಎಂಬ ಮಾತಿದೆ. ವೈದರೆಂದರೆ ದೇವರಿಗೆ ಸಮಾನ, ಜೀವಕ್ಕೆ ಮರು ಜೀವ ತುಂಬಲು ಆ ದೇವರಿಗೆ ಬಿಟ್ಟರೆ ಅವರಿಗೆ ಮಾತ್ರ ಸಾಧ್ಯ. ಆದರೆ ಇದಕ್ಕೆ ವಿರುದ್ಧವಾಗಿ, ಬದುಕಿರುವ ವ್ಯಕ್ತಿಯನ್ನು ಮೃತನೆಂದು ಘೋಷಿಸಿ ಆತನ ಕುಟುಂಬದಿಂದ ಹಣಕ್ಕೆ ಬೇಡಿಕೆ ಇಟ್ಟ ವಿಲಕ್ಷಣ ಘಟನೆಯೊಂದು ಪಂಜಾಬ್ನ ಹೋಶಿಯಾರ್‌ಪುರದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.
ಹೋಶಿಯಾರ್‌ಪುರದ ರಾಮ್ ಕಾಲೋನಿ ಕ್ಯಾಂಪ್‌ನಲ್ಲಿರುವ ನಂಗಲ್ ಶಹೀದ್ ಗ್ರಾಮದ ನಿವಾಸಿಯಾಗಿರುವ ಬಹದ್ದೂರ್ ಸಿಂಗ್ ಎಂಬುವರಿಗೆ ತೀವ್ರ ಉಸಿರಾಟ ಮತ್ತು ಕೆಮ್ಮು ಸಮಸ್ಯೆಗಳನ್ನು ಹೊಂದಿದ್ದರು ಮತ್ತು ಅವರ ಕುಟುಂಬವು ಅವರನ್ನು IVY ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರು ಮೂರ್ನಾಲ್ಕು ಗಂಟೆಗಳ ಚಿಕಿತ್ಸೆಯ ನಂತರ, ಬಹದ್ದೂರ್ ಸಿಂಗ್ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ದಾರೆ. ಅಲ್ಲದೆ ವೈದ್ಯರು ಕುಟುಂಬದವರಿಗೆ ಬಿಲ್ ಪಾವತಿಸಿ ಮೃತದೇಹವನ್ನು ತೆಗೆದುಕೊಂಡು ಹೋಗುವಂತೆ ಸೂಚಿಸಿದ್ದರು. ಇದರಿಂದ ಬಹದ್ದೂರ್ ಸಿಂಗ್ ಅವರ ದೇಹವನ್ನು ಕರೆದೊಯ್ಯುವಾಗ ಅವರ ದೇಹದ ಭಾಗಗಳಲ್ಲಿ ಚಲನವಲನಗಳನ್ನು ಗಮನಿಸಿದರು. ಇದರಿಂದ ಶಾಕ್ಗೆ ಒಳಗಾದ ಸಿಂಗ್ ಮನೆಯವರು ತಕ್ಷಣವೇ ಅಲ್ಲಿಂದ ಪಿಜಿಐ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಅಲ್ಲಿ ಪಿಜಿಐ ವೈದ್ಯರು ಪರೀಕ್ಷಿಸಿ ಚಿಕಿತ್ಸೆ ನೀಡಿದ ನಂತರ ಬಹದ್ದೂರ್ ಸಿಂಗ್ ಅವರಿಗೆ ಪ್ರಜ್ಞೆ ಬಂದಿದೆ. ಬದುಕಿದ್ದರು ಚಿಕಿತ್ಸೆ ನೀಡದೆ ಸಾನ್ನಪ್ಪಿದ್ದಾರೆಂದು ಘೋಷಿಸಿದ ಐವಿವೈ ಆಸ್ಪತ್ರೆಯ ವಿರುದ್ಧ ಕೋಪಗೊಂಡ ಬಹದ್ದೂರ್ ಸಿಂಗ್ ಹಾಗೂ ಮನೆಯವರು ಆಸ್ಪತ್ರೆಯ ಹೊರಗೆ ಪ್ರತಿಭಟನಾ ಧರಣಿ ನಡೆಸಿ, ಆಸ್ಪತ್ರೆಯ ಪರವಾನಗಿಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ. ವಿಶೇಷವೆಂದರೆ ಈ ಪ್ರತಿಭಟನೆಯಲ್ಲಿ ಮೃತನೆಂದು ಘೋಷಿಸಲ್ಪಟ್ಟಿದ್ದ ರೋಗಿ ಬಹದ್ದೂರ್ ಸಿಂಗ್ ಕೂಡ ಪಾಲ್ಗೊಂಡಿದ್ದನು.