ಅಹ್ಮದಾಬಾದ್: ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಪಂಜಾಬ್ ಕಿಂಗ್ಸ್ 34 ರನ್ ಜಯ ದಾಖಲಿಸಿದೆ.
ಐಪಿಎಲ್ : ಆರ್‌ಸಿಬಿ ಮಣಿಸಿದ ಪಂಜಾಬ್ ಕಿಂಗ್ಸ್ - defeated RCB
ಟಾಸ್ ಸೋತು ಬ್ಯಾಟಿಂಗ್‌ಗೆ ಒಳಿದ ಪಂಜಾಬ್ ಕಿಂಗ್ಸ್, 20 ಓವರ್‌ಗೆ 5 ವಿಕೆಟ್ ಕಳೆದು 179 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಬೆಂಗಳೂರು, 20 ಓವರ್‌ಗೆ 8 ವಿಕೆಟ್ ಕಳೆದುಕೊಂಡು 145 ರನ್ ಬಾರಿಸಿ ಸೋಲುಂಡಿದೆ.
ಕೆಎಲ್ ರಾಹುಲ್ ಸ್ಫೋಟಕ ಬ್ಯಾಟಿಂಗ್, ಹರ್‌ಪ್ರೀತ್ ಬ್ರಾರ್ ಮಾರಕ ಬೌಲಿಂಗ್ ನೆರವಿನೊಂದಿಗೆ ಪಂಜಾಬ್ 3ನೇ ಗೆಲುವು ಕಂಡಿದೆ. ಟಾಸ್ ಸೋತು ಬ್ಯಾಟಿಂಗ್‌ಗೆ ಒಳಿದ ಪಂಜಾಬ್ ಕಿಂಗ್ಸ್, 20 ಓವರ್‌ಗೆ 5 ವಿಕೆಟ್ ಕಳೆದು 179 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಬೆಂಗಳೂರು, 20 ಓವರ್‌ಗೆ 8 ವಿಕೆಟ್ ಕಳೆದುಕೊಂಡು 145 ರನ್ ಬಾರಿಸಿ ಸೋಲುಂಡಿದೆ.
ಆರ್ಸಿಬಿಯಲ್ಲಿ ವಿರಾಟ್ ಕೊಹ್ಲಿ 35, ದೇವದತ್ ಪಡಿಕ್ಕಲ್ 7, ರಜತ್ ಪಾಟಿದಾರ್ 31, ಶಹಬಾಝ್ ಅಹ್ಮದ್ 8, ಕೈಲ್ ಜೇಮಿಸನ್ 16, ಹರ್ಷಲ್ ಪಟೇಲ್ 31 ರನ್ ಪಡೆದರೆ,ಪಂಜಾಬ್ ಕಿಂಗ್ಸ್‌ನ ನಾಯಕ ಕೆಎಲ್ ರಾಹುಲ್ ಅಜೇಯ 91 (57), ಕ್ರಿಸ್ ಗೇಲ್ 46, ಪ್ರಭ್‌ಸಿಮ್ರನ್ ಸಿಂಗ್ 7, ದೀಪಕ್ ಹೂಡಾ 5, ಹರ್‌ಪ್ರೀತ್ ಬ್ರಾರ್ 25 ರನ್ ಭಾರಿಸಿದ್ದಾರೆ.