ಕರ್ನಾಟಕ

karnataka

ETV Bharat / bharat

ರೈತರ ಪ್ರತಿಭಟನೆಗೆ ಮಣಿದ ಕೇಂದ್ರ.. ನಾಳೆಯಿಂದಲೇ ಭತ್ತ ಖರೀದಿಗೆ ಗ್ರೀನ್ ಸಿಗ್ನಲ್..

ಮುಂಗಾರು ವಿಳಂಬವಾಗಿದ್ದ ಕಾರಣ ಕೇಂದ್ರ ಸರ್ಕಾರ ಭತ್ತ ಮತ್ತು ರಾಗಿ ಖರೀದಿ ಅಕ್ಟೋಬರ್​ 1ರ ಬದಲು ಅಕ್ಟೋಬರ್​​​​ 11ಕ್ಕೆ ಮುಂದೂಡಿಕೆ ಮಾಡಿತು. ಆದರೆ, ಅಕ್ಟೋಬರ್​​ 1ರಿಂದಲೇ ಆರಂಭಿಸುವಂತೆ ಪ್ರತಿಭಟನೆ ನಡೆದಿದ್ದವು..

Paddy
Paddy

By

Published : Oct 2, 2021, 6:42 PM IST

ನವದೆಹಲಿ :ಪಂಜಾಬ್​, ಹರಿಯಾಣ ರೈತರ ಪ್ರತಿಭಟನೆಗೆ ಕೊನೆಗೂ ಮಣಿದಿರುವ ಕೇಂದ್ರ ಸರ್ಕಾರ ನಾಳೆಯಿಂದಲೇ ಭತ್ತ(Paddy) ಖರೀದಿಗೆ ಗ್ರೀನ್​ ಸಿಗ್ನಲ್ ನೀಡಿದೆ. ಭತ್ತ, ರಾಗಿ ಖರೀದಿಗೆ ಅಕ್ಟೋಬರ್​ 11ರಿಂದ ಚಾಲನೆ ನೀಡಲಾಗುವುದು ಎಂದು ಈ ಹಿಂದೆ ಕೇಂದ್ರ ಸರ್ಕಾರ ಹೇಳಿತ್ತು. ಹೀಗಾಗಿ, ಪಂಜಾಬ್​ ಹಾಗೂ ಹರಿಯಾಣದಲ್ಲಿ ಕಳೆದ ಕೆಲ ದಿನಗಳಿಂದ ರೈತರು ಪ್ರತಿಭಟನೆ ನಡೆಸಿದ್ದರು.

ಹರಿಯಾಣ ಮುಖ್ಯಮಂತ್ರಿ ಮನೋಹರ್​ಲಾಲ್​ ಖಟ್ಟರ್​​ ಹಾಗೂ ದುಷ್ಯಂತ್​ ಚೌಟಾಲಾ ಅವರೊಂದಿಗಿನ ಮಾತುಕತೆ ಬಳಿಕ ಕೇಂದ್ರ ಆಹಾರ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್​​ ಚೌಬೆ ಮಾಹಿತಿ ನೀಡಿದ್ದಾರೆ. ಹರಿಯಾಣ ಹಾಗೂ ಪಂಜಾಬ್​​ನಲ್ಲಿ ನಾಳೆಯಿಂದ ಭತ್ತ, ರಾಗಿ ಬೆಳೆ ಖರೀದಿ ಆರಂಭವಾಗಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಮುಂಗಾರು ವಿಳಂಬವಾಗಿದ್ದ ಕಾರಣ ಕೇಂದ್ರ ಸರ್ಕಾರ ಭತ್ತ ಮತ್ತು ರಾಗಿ ಖರೀದಿಯನ್ನ ಅಕ್ಟೋಬರ್​ 1ರ ಬದಲು ಅಕ್ಟೋಬರ್​​ 11ಕ್ಕೆ ಮುಂದೂಡಿಕೆ ಮಾಡಿತು. ಆದರೆ, ಅಕ್ಟೋಬರ್​​ 1ರಿಂದಲೇ ಆರಂಭಿಸುವಂತೆ ಪ್ರತಿಭಟನೆ ನಡೆದಿದ್ದವು. ನಿನ್ನೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ್ದ ಪಂಜಾಬ್​ ಸಿಎಂ ಚರಣ್​ಜಿತ್​ ಸಿಂಗ್​ ಚನ್ನಿ ಕೂಡ ಈ ವಿಷಯವಾಗಿ ಪ್ರಸ್ತಾಪ ಮಾಡಿದ್ದರು.

ಇದನ್ನೂ ಓದಿರಿ:10 ತಿಂಗಳ ಮಗುವಿಗೆ ಮನೆ ಕೆಲಸದಾಕೆಯ ಚಿತ್ರಹಿಂಸೆ.. ವಿಡಿಯೋ ವೈರಲ್​

ನಿನ್ನೆ, ಹೊಸ ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಚನ್ನಿ ಅವರು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಕೃಷಿ ಕಾನೂನುಗಳ ಬಗ್ಗೆ ಚರ್ಚಿಸಲು ಮತ್ತು ಕೇಂದ್ರಕ್ಕೆ ಭತ್ತ ಮತ್ತು ರಾಗಿ ಖರೀದಿಯನ್ನು ಆರಂಭಿಸಲು ಕೇಳಿದರು. ಇಂದು ಬೆಳಗ್ಗೆ ಹರಿಯಾಣ ಸಿಎಂ ಮನೋಹರ್​ಲಾಲ್ ಖಟ್ಟರ್​ ನಿವಾಸದ ಮುಂದೆ ದೊಡ್ಡ ಪ್ರಮಾಣದ ಪ್ರತಿಭಟನೆ ಸಹ ನಡೆದಿತ್ತು. ಇದರ ಬೆನ್ನಲ್ಲೇ ಮಹತ್ವದ ಸಭೆ ನಡೆದಿತ್ತು.

ಭತ್ತ ಖರೀದಿಗೆ ಕೇಂದ್ರ ಒಪ್ಪಿಗೆ

ABOUT THE AUTHOR

...view details