ಚಂಡೀಗಢ:ಪಂಜಾಬ್‌ನಲ್ಲಿ ಬಂದೂಕು ಸಂಸ್ಕೃತಿಯ ವಿರುದ್ಧ ಕಟ್ಟುನಿಟ್ಟಿನ ಕಾನೂನುಗಳನ್ನು ಜಾರಿಗೆ ತಂದ ನಂತರ ಅಮೃತಸರದಲ್ಲಿ 10 ವರ್ಷದ ಮಗುವಿನ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಕುರಿತು ಹಿರಿಯ ಅಕಾಲಿದಳದ ನಾಯಕ ಬಿಕ್ರಮ್ ಮಜಿಥಿಯಾ ಅವರು ಸಿಎಂ ಭಗವಂತ್ ಮಾನ್ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಸಿಎಂ ಭಗವಂತ್ ಮಾನ್ ಬಂದೂಕು ಹಿಡಿದಿರುವ ಹಳೆಯ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅವರು ಚಿತ್ರಕ್ಕೆ 'ಸ್ನೇಹಿತರು ಆಯುಧಗಳನ್ನು ಇಷ್ಟಪಡುತ್ತಾರೆಯೇ'? ಎಂದು ಶೀರ್ಷಿಕೆ ನೀಡಿದ್ದಾರೆ. ಚಿತ್ರದಲ್ಲಿ ಭಗವಂತ್ ಮಾನ್ ಡಬಲ್ ಬ್ಯಾರಲ್ ಗನ್ ಹಿಡಿದುಕೊಂಡು ಗುಂಡು ಹಾರಿಸುತ್ತಿರುವುದನ್ನು ಕಾಣಬಹುದು. ಟ್ವೀಟ್‌ನಲ್ಲಿ ಮಜಿಥಿಯಾ ಅವರು ಸಿಎಂ ಮಾನ್ ಅವರನ್ನು ಟ್ಯಾಗ್ ಮಾಡಿ, 'ಸ್ನೇಹಿತರು ಬಂದೂಕುಗಳನ್ನು ಇಷ್ಟಪಡುತ್ತಾರೆ. ಆದರೆ ಮಕ್ಕಳ ವಿರುದ್ಧ ಎಫ್‌ಐಆರ್‌ಗಳನ್ನು ದಾಖಲಿಸಲಾಗುತ್ತಿದೆ' ಎಂದು ಬರೆದಿದ್ದಾರೆ.
10 ವರ್ಷದ ಮಗುವಿನ ಮೇಲೆ ಎಫ್‌ಐಆರ್: ಕೆಲ ದಿನಗಳ ಹಿಂದೆ 10 ವರ್ಷದ ಮಗುವಿನ ಮೇಲೆ ಬಂದೂಕು ಸಂಸ್ಕೃತಿಗೆ ಪ್ರೋತ್ಸಾಹ ನೀಡಿದ ಆರೋಪದಡಿ ಹಲ್ಕಾ ಮಜಿತದ ಕಥುನಂಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಆ ಚಿತ್ರ ಹಳೆಯದಾಗಿದ್ದು, ಆ ಮಗುವಿಗೆ ಆಗ 4 ವರ್ಷ. ಈ ಚಿತ್ರವನ್ನು 6 ವರ್ಷಗಳ ಹಿಂದೆ ಮಗುವಿನ ತಂದೆ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿದ ಪೊಲೀಸರು ಇಲಾಖಾ ತನಿಖೆಗೆ ಆದೇಶಿಸಿದ್ದಾರೆ.