ಚಂಡೀಗಢ (ಪಂಜಾಬ್):ದೆಹಲಿಯಲ್ಲಿ ಅನುಷ್ಠಾನ ಮಾಡಲು ನಿರ್ಧರಿಸಿದ್ದ ಮನೆ ಬಾಗಿಲಿಗೆ ಪಡಿತರ ವಿತರಣೆ ಕಾರ್ಯಕ್ರಮವನ್ನು ಇದೀಗ ಪಂಜಾಬ್‌ನಲ್ಲಿ ಜಾರಿಗೆ ತರಲು ನಿರ್ಧರಿಸಿದ್ದೇವೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ತಿಳಿಸಿದ್ದಾರೆ. ಇದೇ ವೇಳೆ, ಈ ಯೋಜನೆಯು ಐಚ್ಛಿಕವಾಗಿದ್ದು,(ಅಗತ್ಯ ಇರುವವರಿಗೆ ಮಾತ್ರ) ವಿನಂತಿಯ ಮೇರೆಗೆ ಮಾತ್ರ ಒದಗಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳ ನಂತರವೂ ಬಡವರು ಉದ್ದನೆಯ ಸರತಿ ಸಾಲಿನಲ್ಲಿ ನಿಲ್ಲುವುದು ದುರದೃಷ್ಟಕರ ಬೆಳವಣಿಗೆ. ಶ್ರೀಮಂತರು ತಮ್ಮ ಮನೆಯಲ್ಲಿಯೇ ಒಂದು ಮೌಸ್ ಕ್ಲಿಕ್‌ನಲ್ಲಿ ಎಲ್ಲವನ್ನೂ ಪಡೆದುಕೊಳ್ಳಬಹುದು. ಹೊಟ್ಟೆಪಾಡಿಗಾಗಿಯೇ ಬದುಕುವವರು ತಮ್ಮ ದಿನದ ಕೆಲಸ ಬಿಟ್ಟು ಪಡಿತರ ಡಿಪೋಗಳಿಗೆ ಕಿಲೋಮೀಟರ್‌ಗಟ್ಟಲೆ ನಡೆದುಕೊಂಡು ಹೋಗಬೇಕಾಗುತ್ತದೆ. ಈ ಯೋಜನೆ ಅಂಥವರಿಗೆ ಉಪಯೋಗವಾಗಲಿದೆ ಎಂದು ಸಿಎಂ ಹೇಳಿದರು.