ಕರ್ನಾಟಕ

karnataka

ETV Bharat / bharat

ಪಂಜಾಬ್ ವಿಧಾನಸಭೆ​ ದಂಗಲ್​: 117 ಕ್ಷೇತ್ರಗಳಿಗೆ 1304 ಅಭ್ಯರ್ಥಿಗಳ ಫೈಟ್​​! - ಪಂಜಾಬ್ ವಿಧಾನಸಭೆ​ ದಂಗಲ್

ಪಂಜಾಬ್ ವಿಧಾನಸಭೆ ಚುನಾವಣೆಗೆ ಅಂತಿಮವಾಗಿ 1304 ಅಭ್ಯರ್ಥಿಗಳು ಕಣದಲ್ಲಿದ್ದು, 117 ಕ್ಷೇತ್ರಗಳಿಂದ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

punjab Election
punjab Election

By

Published : Feb 5, 2022, 10:49 PM IST

ಚಂಡೀಗಢ(ಪಂಜಾಬ್):ಪಂಜಾಬ್​ ವಿಧಾನಸಭೆ ಚುನಾವಣೆ ಅಖಾಡ ರಂಗೇರಿದ್ದು, 117 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಫೆ. 20ರಂದು ಮತದಾನ ನಡೆಯಲಿದೆ. ಎಲ್ಲ ಕ್ಷೇತ್ರಗಳಿಗೂ ಅಭ್ಯರ್ಥಿಗಳು ಈಗಾಗಲೇ ನಾಮಪತ್ರ ಸಲ್ಲಿಕೆ ಮಾಡಿದ್ದು, ಒಟ್ಟು 1304 ಸ್ಪರ್ಧಿಗಳು ಅಂತಿಮ ಕಣದಲ್ಲಿದ್ದಾರೆ.

ಭಾರತೀಯ ಜನತಾ ಪಾರ್ಟಿ, ಕಾಂಗ್ರೆಸ್​, ಆಮ್​ ಆದ್ಮಿ ಹಾಗೂ ಶಿರೋಮಣಿ ಅಕಾಲಿದಳಕ್ಕೆ ಪ್ರತಿಷ್ಠೆಯ ಕಣವಾಗಿರುವ ಪಂಜಾಬ್​​​ನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಇನ್ನಿಲ್ಲದ ಕಸರತ್ತು ನಡೆದಿದ್ದು, ಅಭ್ಯರ್ಥಿಗಳು ಈಗಾಗಲೇ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಇದನ್ನೂ ಓದಿರಿ:ವಿಡಿಯೋ: BJP ಕಾರ್ಯಕರ್ತರಿಗೆ ಪ್ರಣಾಳಿಕೆ ನೀಡಲು ರೋಡ್​ಶೋ ನಿಲ್ಲಿಸಿದ ಪ್ರಿಯಾಂಕಾ!

ಪಟಿಯಾಲಾ, ದೇಹತಿ ಮತ್ತು ಸಾಹ್ನೇವಾಲ್​ನಲ್ಲಿ ಅತಿ ಹೆಚ್ಚು 19 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ದೀನಾನಗರ, ಚಂಡೀಗಢದಲ್ಲಿ ಕನಿಷ್ಠ ಐವರು ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಚುನಾವಣೆಗೋಸ್ಕರ ಒಟ್ಟು 2,266 ನಾಮಪತ್ರ ಸಲ್ಲಿಕೆಯಾಗಿದ್ದು, ಇದರಲ್ಲಿ 588 ಉಮೇದುವಾರಿಕೆ ರದ್ದುಗೊಳಿಸಿರುವುದಾಗಿ ಪಂಜಾಬ್​ ಮುಖ್ಯ ಚುನಾವಣಾಧಿಕಾರಿ ಕರುಣಾ ರಾಜು ತಿಳಿಸಿದ್ದಾರೆ. 1645 ನಾಮಪತ್ರಗಳ ಪೈಕಿ 341 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಹಿಂಪಡೆದುಕೊಂಡಿದ್ದು, ಇದೀಗ ಕಣದಲ್ಲಿ 1304 ಅಭ್ಯರ್ಥಿಗಳಿದ್ದಾರೆಂದು ತಿಳಿಸಿದ್ದಾರೆ.

ಐದು ಸಲ ಪಂಜಾಬ್​ ಮುಖ್ಯಮಂತ್ರಿ ಆಗಿದ್ದ ಪ್ರಕಾಶ್ ಸಿಂಗ್ ಬಾದ್​​ ಕಣದಲ್ಲಿದ್ದು, ಎಎಪಿ ಗುರ್ಮಿತ್​ ಹಾಗೂ ಕಾಂಗ್ರೆಸ್​​ ಜಗ್ಪಾಲ್​ ಸಿಂಗ್​ ಕೂಡ ಸ್ಪರ್ಧೆ ಮಾಡಿದ್ದಾರೆ. ಸಾಹೀಬಾ ಕ್ಷೇತ್ರದಿಂದ ಹಾಲಿ ಸಿಎಂ ಚರಣ್​ಜಿತ್ ಸಿಂಗ್​ ಚನ್ನಿ ಕಾಂಗ್ರೆಸ್​ ಅಭ್ಯರ್ಥಿಯಾಗಿದ್ದು, ಈ ಕ್ಷೇತ್ರದಿಂದ 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅಮೃತಸರ್ ಪೂರ್ವದಿಂದ 10 ಅಭ್ಯರ್ಥಿಗಳು ಕಣದಲ್ಲಿದ್ದು, ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್​ ಸಿಧು, ಅಕಾಲಿ ದಳದಿಂದ ಬಿಕ್ರಮ್​ ಮಜಿಥಿಯಾ ಸ್ಪರ್ಧೆ ಮಾಡಿದ್ದಾರೆ.

ABOUT THE AUTHOR

...view details