ಮೊಹಾಲಿ(ಪಂಜಾಬ್):ಪಂಚ ರಾಜ್ಯ ಚುನಾವಣೆಗೆ ಎಲ್ಲ ರಾಜ್ಯಗಳಲ್ಲೂ ಭರ್ಜರಿ ತಯಾರಿಯನ್ನು ಪಕ್ಷಗಳು ನಡೆಸುತ್ತಿವೆ. ದೆಹಲಿಯಲ್ಲಿ ಮ್ಯಾಜಿಕ್ ಮಾಡಿದ್ದ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಪಂಜಾಬ್ನಲ್ಲಿಯೂ ವಿಧಾನಸಭಾ ಚುನಾವಣೆಗೆ ಅದ್ಧೂರಿ ಸಿದ್ಧತೆ ನಡೆಸುತ್ತಿದ್ದು, ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ.
ಅರವಿಂದ್ ಕೇಜ್ರಿವಾಲ್ ಅವರು ಮೊಹಾಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಮಾತನಾಡಿದ್ದು, ಪಂಜಾಬ್ ಚುನಾವಣೆಗೆ ಸಿಎಂ ಅಭ್ಯರ್ಥಿಯನ್ನಾಗಿ ಸಂಗ್ರೂರ್ ಕ್ಷೇತ್ರದ ಸಂಸದ ಭಗವಂತ್ ಮಾನ್ ಅವರನ್ನು ಘೋಷಿಸಿದ್ದಾರೆ. ಈ ಮೂಲಕ ಆಮ್ ಆದ್ಮಿ ಪಕ್ಷವೂ ಇತರ ಪಕ್ಷಗಳೊಂದಿಗೆ ಮುಂಚೂಣಿಯಲ್ಲಿರುವ ಪಕ್ಷವಾಗಿ ಗುರ್ತಿಸಿಕೊಂಡಿದೆ.