ಚಂಡೀಗಢ(ಪಂಜಾಬ್): ಜನ - ಸಾಮಾನ್ಯರ ರಕ್ಷಣೆ ಮಾಡಬೇಕಾದ ಖಾಕಿ ಪಡೆ ಕೆಲವೊಮ್ಮೆ ಕಳ್ಳತನ ಮಾಡಲು ಹೋಗಿ ಸಿಕ್ಕಿಹಾಕಿಕೊಂಡಿರುವ ಅನೇಕ ಘಟನೆ ನಮ್ಮ ಮುಂದಿವೆ. ಸದ್ಯ ಅಂತಹದೊಂದು ಘಟನೆ ಪಂಜಾಬ್ನಲ್ಲಿ ನಡೆದಿದ್ದು, ಅದರ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ರಾಜಧಾನಿಯಿಂದ 40 ಕಿಲೋ ಮೀಟರ್ ದೂರದಲ್ಲಿರುವ ಫತೇಘಡ್ ಸಾಹಿಬ್ ಪಟ್ಟಣದ ಜನ ನಿಬಿಡ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಪೊಲೀಸ್ ಹೆಡ್ ಕಾನ್ಸ್ಟೇಬಲ್ ಒಬ್ಬ ರಸ್ತೆ ಪಕ್ಕದಲ್ಲಿ ಸೈಕಲ್ ಮೇಲೆ ಇಡಲಾಗಿದ್ದ ಟ್ರೇಯಲ್ಲಿನ ಮೊಟ್ಟೆ ಕದ್ದಿದ್ದಾರೆ. ಪೊಲೀಸ್ ಸಮವಸ್ತ್ರದಲ್ಲಿ ಈ ಕೆಲಸ ಮಾಡಿದ್ದು, ಒಂದೊಂದಾಗಿ ಮೊಟ್ಟೆಗಳನ್ನ ಜೇಬಿನೊಳಗೆ ಹಾಕಿಕೊಂಡಿದ್ದಾನೆ.
ಇದನ್ನೂ ಓದಿ: ಕೋವಿಡ್ ನಡುವೆ ವಿಶಿಷ್ಟ ವಿವಾಹ: ಭಾರತೀಯನ ಕೈಹಿಡಿದ ಫಿಲಿಪ್ಪಿನ್ಸ್ ಹುಡುಗಿ!
ಸ್ಥಳಕ್ಕೆ ಮಾಲೀಕ ಆಗಮಿಸುತ್ತಿದ್ದಂತೆ ಪೊಲೀಸ್ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಇದರ ವಿಡಿಯೋ ದೃಶ್ಯ ವೈರಲ್ ಆಗ್ತಿದ್ದಂತೆ ಅವರನ್ನ ಅಮಾನತು ಮಾಡಲಾಗಿದೆ. ಈ ಕೃತ್ಯ ಎಸಗಿರುವ ಪೊಲೀಸ್ ಕಾನ್ಸ್ಟೇಬಲ್ನನ್ನ ಪ್ರಿತ್ಪಾಲ್ ಸಿಂಗ್ ಎಂದು ಗುರುತಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಪಂಜಾಬ್ ಪೊಲೀಸ್, ಪೊಲೀಸ್ ಹೆಡ್ ಕಾನ್ಸ್ಟೇಬಲ್ ಮೊಟ್ಟೆ ಕಳ್ಳತನ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಅದರ ಆಧಾರದ ಮೇಲೆ ಕಲಸದಿಂದ ವಜಾಗೊಳಿಸಲಾಗಿದ್ದು, ಪ್ರಕರಣ ದಾಖಲು ಮಾಡಿಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಟ್ವೀಟ್ ಮಾಡಿದೆ.