ಕರ್ನಾಟಕ

karnataka

ETV Bharat / bharat

ದೆಹಲಿಯಲ್ಲಿ ಕಾಂಗ್ರೆಸ್​ ನಾಯಕರನ್ನು ಭೇಟಿ ಮಾಡಲಿರುವ ನವಜೋತ್​ ಸಿಂಗ್​ ಸಿಧು - ಕ್ಯಾಪ್ಟನ್ ಅಮರೀಂದರ್​ ಸಿಂಗ್

ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್​ ಸಿಂಗ್ ಅವರನ್ನು ನಿರಂತರವಾಗಿ ಟೀಕಿಸುತ್ತಾ ಬಂದಿರುವ ನವಜೋತ್ ಸಿಂಗ್ ಸಿಧು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಬುಧವಾರ ದೆಹಲಿಯಲ್ಲಿ ಭೇಟಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

punjab
ನವಜೋತ್​ ಸಿಂಗ್​ ಸಿಧು

By

Published : Jun 28, 2021, 10:30 PM IST

ನವದೆಹಲಿ: ಪಂಜಾಬ್​ ಕಾಂಗ್ರೆಸ್​​ನಲ್ಲಿ ನಡೆಯುತ್ತಿರುವ ಒಳಜಗಳ ನಡುವೆ ಇದೀಗ ಅಸಮಾಧಾನಿತ ಪಕ್ಷದ ಮುಖಂಡ ನವಜೋತ್​ ಸಿಂಗ್​ ಸಿಧು ಬುಧವಾರ ಪಕ್ಷದ ನಾಯಕರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಪಕ್ಷದಲ್ಲಿ ಉಂಟಾಗಿರುವ ವಿವಾದವನ್ನು ಕೊನೆಗೊಳಿಸಲು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್​ ಸಿಂಗ್ ಅವರು ಪಕ್ಷದ ಸಮಿತಿಯೊಂದಿಗೆ ಸಭೆ ನಡೆಸಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ.

ಮೂಲಗಳ ಪ್ರಕಾರ ಸಿಧು, ಪಕ್ಷದ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಇನ್ನು ಸಂಸದರಾದ ಗುರ್ಜಿತ್ ಸಿಂಗ್ ಆಜ್ಲಾ, ಶಂಶರ್ ಸಿಂಗ್ ಧಿಲ್ಲೋನ್, ಶಾಸಕರಾದ ಲಖ್ವೀರ್ ಸಿಂಗ್ ಮತ್ತು ರಾಣಾ ಗುರ್ಜಿತ್ ಸಿಂಗ್ ಮತ್ತು ವಿಜೇಂದ್ರ ಸಿಂಗ್ಲಾ ಸೇರಿದಂತೆ ಇತರ ನಾಯಕರೊಂದಿಗೆ ಹಲವಾರು ಸುತ್ತಿನ ಮಾತುಕತೆ ನಡೆಸಿದ ರಾಹುಲ್​ ಗಾಂಧಿ, ಪಂಜಾಬ್​ ಕಾಂಗ್ರೆಸ್​​ನಲ್ಲಿ ಉಂಟಾಗಿರುವ ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

ಮುಖ್ಯಮಂತ್ರಿ ಅಮರೀಂದರ್​ ಸಿಂಗ್ ವಿರುದ್ಧ ಸಿಧು, ಪಂಜಾಬ್​ನಲ್ಲಿ ಮುಗಿಯದ ಸಮಸ್ಯೆಗಳನ್ನು ಪರಿಹರಿಸಲು ತಮ್ಮ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನಿರಂತರವಾಗಿ ಟೀಕಿಸುತ್ತಿದ್ದಾರೆ.

ABOUT THE AUTHOR

...view details