ಚಂಡೀಗಢ:ಸರ್ಕಾರದಲ್ಲಿ ಪಾರದರ್ಶಕತೆ ಕಾಪಾಡುತ್ತಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಇದೀಗ ಆಡಳಿತದಲ್ಲಿ ಡಿಜಿಟಲೀಕಣಕ್ಕೆ ಒತ್ತು ನೀಡಿದ್ದು, ಈ ಸಾಲಿನ ಬಜೆಟ್ ಅನ್ನು ಕಾಗದ ರಹಿತವಾಗಿ ನಡೆಸಲು ಘೋಷಿಸಿದ್ದಾರೆ.
ಈ ವರ್ಷದ ಪಂಜಾಬ್ ಬಜೆಟ್ ಕಾಗದ ರಹಿತವಾಗಿರುತ್ತದೆ ಎಂದು ಟ್ವೀಟ್ ಮಾಡಿರುವ ಮಾನ್, ಪಂಜಾಬಿಗಳಿಗೆ ಒಳ್ಳೆಯ ಸುದ್ದಿ. ಈ ಬಾರಿ ಪಂಜಾಬ್ ಸರ್ಕಾರದ ಬಜೆಟ್ ಕಾಗದ ರಹಿತವಾಗಿರಲು ನಿರ್ಧರಿಸಿದೆ. ಇದರಿಂದ 21 ಲಕ್ಷ ರೂಪಾಯಿ ಉಳಿಯಲಿದ್ದು, ಇದನ್ನು ಸಾರ್ವಜನಿಕ ಕಲ್ಯಾಣಕ್ಕಾಗಿ ಬಳಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.