ಚಂಡೀಗಢ:ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಸಚಿವರ, ಶಾಸಕರ ಭದ್ರತೆ ರದ್ದು, 25 ಸಾವಿರ ಸರ್ಕಾರಿ ಹುದ್ದೆಗಳ ನೇಮಕಕ್ಕೆ ಸೂಚನೆ, ಭ್ರಷ್ಟಾಷಾರ ನಿಗ್ರಹಕ್ಕೆ ಸಹಾಯವಾಣಿ ಆರಂಭಿಸಿದ್ದಾರೆ. ಇದರ ಬೆನ್ನಲ್ಲೇ ಉತ್ತಮವಾಗಿ ಕಾರ್ಯನಿರ್ವಹಿಸದ ಸಚಿವರನ್ನು 'ಅಧಿಕಾರದಿಂದ ಕೆಳಗಿಳಿಸುವ ಹಕ್ಕನ್ನು ಜನರಿಗೆ ನೀಡಿ' ಗಮನ ಸೆಳೆದಿದ್ದಾರೆ.
ಈ ಬಗ್ಗೆ ಮೊಹಾಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ ಪಕ್ಷದ ಅಧ್ಯಕ್ಷ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಸಿಎಂ ಭಗವಂತ್ ಮಾನ್ ಅವರು ಸರ್ಕಾರದಲ್ಲಿ ಉತ್ತಮ ನಡೆಗಳನ್ನು ಅನುಸರಿಸುತ್ತಿದ್ದಾರೆ. ಜನರನ್ನು ಸಂಪರ್ಕಿಸಿ ಅವರ ಸಮಸ್ಯೆಯನ್ನು ಆಲಿಸುವ ಟಾರ್ಗೆಟ್ ಅನ್ನು ಸಚಿವರು, ಶಾಸಕರಿಗೆ ನೀಡಿದ್ದಾರೆ. ಇದನ್ನು ಪಾಲಿಸದವರನ್ನು ಜನರೇ ಅಧಿಕಾರದಿಂದ ತೆಗೆದು ಹಾಕುವ ಬಗ್ಗೆ ಒತ್ತಾಯಿಸಬಹುದು ಎಂಬ ಅವಕಾಶವನ್ನು ನೀಡಿದ್ದಾರೆ ಎಂದು ಹೇಳಿದರು.