ಕರ್ನಾಟಕ

karnataka

ETV Bharat / bharat

ಅಮಿತ್ ಶಾ ಭೇಟಿಯಾದ ಪಂಜಾಬ್ ನೂತನ ಸಿಎಂ - ಲಖೀಮಪುರ್ ಹಿಂಸಾಚಾರ

ಪಂಜಾಬ್ ನೂತನ ಸಿಎಂ ಚರಣಜಿತ್ ಸಿಂಗ್ ಚನ್ನಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಅಮಿತ್ ಶಾ ಭೇಟಿಯಾದ ಪಂಜಾಬ್ ನೂತನ ಸಿಎಂ
ಅಮಿತ್ ಶಾ ಭೇಟಿಯಾದ ಪಂಜಾಬ್ ನೂತನ ಸಿಎಂ

By

Published : Oct 6, 2021, 4:51 AM IST

ನವದೆಹಲಿ:ಪಂಜಾಬ್ ನೂತನ ಸಿಎಂ ಚರಣಜಿತ್ ಸಿಂಗ್ ಚನ್ನಿ ಅವರು ಕೇಂದ್ರ ಗೃಹ ಇಲಾಖೆ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಉತ್ತರ ಪ್ರದೇಶದ ಲಖೀಮ್​ಪುರ್ ಖೇರಿ ಹಿಂಸಾಚಾರದ ಅಪರಾಧಿಗಳನ್ನು ಬಂಧಿಸಿವಂತೆ ಮನವಿ ಮಾಡಿದರು.

ಇಲ್ಲಿನ ಗೃಹ ಸಚಿವರ ನಿವಾಸದಲ್ಲಿ ಅಮಿತ್ ಶಾ ಅವರನ್ನು ಭೇಟಿಯಾದ ಪಂಜಾಬ್ ಸಿಎಂ, ಹಲವು ವಿಷಯಗಳ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಭೇಟಿ ವೇಳೆ ಗಡಿಯಲ್ಲಿ ಡ್ರಗ್ಸ್ ಹಾಗೂ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಸಮಸ್ಯೆ ಬಗ್ಗೆ ಸಿಎಂ ಪ್ರಸ್ತಾಪಿಸಿ, ಈ ಸಮಸ್ಯೆಗಳ ಪರಿಹರಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಇನ್ನು ಇದೇ ವಳೆ ಲಖೀಮ್​ಪುರ್ ಹಿಂಸಾಚಾರದ ಬಗ್ಗೆ ಪಂಜಾಬ್ ಸಿಎಂ ಆಕ್ರೋಶ ವ್ಯಕ್ತಪಡಿಸಿ, ಅಪರಾಧಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಜೊತೆಗೆ ಘಟನೆಯಲ್ಲಿ ಮೃತಪಟ್ಟವರ ಕುಟುಂಬಸ್ಥರ ಭೇಟಿಗೆ ತೆರಳಿದ ಕಾಂಗ್ರೆಸ್ ನಾಯಕರನ್ನು ಬಂಧಿಸಿರುವ ಕ್ರಮವನ್ನು ಖಂಡಿಸಿದ್ದಾರೆ.

ಕೇಂದ್ರ ಸಚಿವರ ಭೇಟಿಯಿಂದ ಉತ್ತಮ ಫಲಶೃತಿ ಬರಲಿದೆ ಎಂದು ಪಂಜಾಬ್ ಸಿಎಂ ಭರವಸೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details