ಚಂಡೀಗಢ: ಪಂಜಾಬ್‌ನಲ್ಲಿ ಫೆಬ್ರವರಿ 14 ರಂದು ವಿಧಾನಸಭೆ ಚುನಾವಣೆ ನಡೆಯುತ್ತಿರುವ ಬೆನ್ನಲ್ಲೇ ಸಿಎಂ ಚರಣ್‌ಜಿತ್ ಸಿಂಗ್ ಚನ್ನಿಗೆ ತಮ್ಮ ಸಹೋದರ ಸಂಬಂಧಿ ಬಿಗ್ ಶಾಕ್ ನೀಡಿದ್ದಾರೆ.
ಸಿಎಂ ಚನ್ನಿ ಅವರ ಸಹೋದರ ಸಂಬಂಧಿ ಜಸ್ವಿಂದರ್ ಸಿಂಗ್ ಧಾಲಿವಾಲ್ ಅವರು ಬಿಜೆಪಿ ಸೇರಿದ್ದಾರೆ. ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರ ನೇತೃತ್ವದಲ್ಲಿ ಜಸ್ವಿಂದರ್ ನಿನ್ನೆ ಕಮಲ ಮುಡಿದಿದ್ದಾರೆ. ಇದು ಸಿಎಂ ಚನ್ನಿ ಅವರಿಗೆ ಅಲ್ಪ ಹಿನ್ನಡೆ ಎನ್ನಲಾಗಿದೆ.