ಕರ್ನಾಟಕ

karnataka

ETV Bharat / bharat

ಪ್ರವಾಹದ ರಭಸಕ್ಕೆ ಬ್ಯಾಲೆನ್ಸ್​ ಕಳೆದುಕೊಂಡ ದೋಣಿ... ಅಪಾಯದಿಂದ ಪಂಜಾಬ್ ಸಿಎಂ ಪಾರು - ಪಂಜಾಬ್​ನಲ್ಲಿ ಪ್ರವಾಹ

ಪಂಜಾಬ್​ನಲ್ಲಿ ಪ್ರವಾಹ ಪೀಡಿತ ಸ್ಥಳಗಳ ಪರಿಶೀಲನೆಗೆ ತೆರಳುತ್ತಿದ್ದ ​ಮುಖ್ಯಮಂತ್ರಿ ಭಗವಂತ್ ಮಾನ್ ಅವರ ದೋಣಿ ಮಗುಚಿ ಬೀಳುವುದರಿಂದ ಪಾರಾಗಿದೆ.

Punjab CM Bhagwant Manns Boat losses balance While Visit To Flood Affected areas
ಪ್ರವಾಹದ ರಭಸಕ್ಕೆ ಬ್ಯಾಲೆನ್ಸ್​ ಕಳೆದುಕೊಂಡ ದೋಣಿ... ಅಪಾಯದಿಂದ ಪಂಜಾಬ್ ಸಿಎಂ ಪಾರು

By

Published : Jul 15, 2023, 9:28 PM IST

ಚಂಡೀಗಢ (ಪಂಜಾಬ್): ಪ್ರವಾಹ ಪೀಡಿತ ಸ್ಥಳಗಳ ಪರಿಶೀಲನೆಗೆ ತೆರಳಿದ್ದಾಗ ಪಂಜಾಬ್​ ಮುಖ್ಯಮಂತ್ರಿ ಭಗವಂತ್ ಮಾನ್ ದೋಣಿ ಅವಘಡದಿಂದ ಪಾರಾಗಿದ್ದಾರೆ. ಪ್ರವಾಹ ಹೆಚ್ಚಾಗಿ ಸಿಎಂ ಭಗವಂತ್ ಮಾನ್​ ಪ್ರಯಾಣಿಸುತ್ತಿದ್ದ ದೋಣಿ ಮಗುಚಿ ಬೀಳುವ ಹಂತಕ್ಕೆ ತಲುಪಿದೆ. ಆದರೆ, ಅದೃಷ್ಟವಶಾತ್ ದೋಣಿ ಸುರಕ್ಷಿತವಾಗಿ ಪ್ರಯಾಣ ಮುಂದುವರೆದಿದೆ. ಇದರಿಂದ ಕೂದಲೆಳೆಯ ಅಂತರದಿಂದ ಸಿಎಂ ಪಾರಾಗಿದ್ದು, ಈ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನಿರಂತರ ಮಳೆಯಿಂದ ಪಂಜಾಬ್​ನ ಹಲವು ಭಾಗಗಳಲ್ಲಿ ಪ್ರವಾಹ ಉಂಟಾಗಿದೆ. ಇದರಿಂದಾಗಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಅನೇಕ ಹಳ್ಳಿಗಳು ಜಲಾವೃತಗೊಂಡಿದ್ದು, ಮನೆಗಳ ಛಾವಣಿಯ ಮೇಲೆ ಜನತೆ ಹತ್ತಿ ಕುಳಿತಿದ್ದಾರೆ. ಜೊತೆಗೆ ಹಲವು ಸಮಸ್ಯೆಗಳನ್ನು ಜನರು ಎದುರಿಸುತ್ತಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಮುಖ್ಯಮಂತ್ರಿ ಭಗವಂತ್ ಮಾನ್ ತೆರಳಿ ಸ್ಥಿತಿ ಅವಲೋಕಿಸುತ್ತಿದ್ದಾರೆ. ಅಲ್ಲದೇ, ಪ್ರವಾಹ ಸಂತ್ರಸ್ತರನ್ನು ಭೇಟಿ ಮಾಡಿ ಸಿಎಂ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ.

ಇದನ್ನೂ ಓದಿ:ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಸ್ತೆ ಮೇಲೆ ವಿಷಕಾರಿ ಹಾವುಗಳು ಪ್ರತ್ಯಕ್ಷ.. ಜನರಿಗೆ ಆತಂಕ

ಅಂತೆಯೇ ಶುಕ್ರವಾರ ಸಹ ಸಿಎಂ ಭಗವಂತ್ ಮಾನ್ ಮಾಲ್ವಾ ಪ್ರದೇಶಕ್ಕೆ ಭೇಟಿ ನೀಡಿದ್ದರು. ಫಿರೋಜ್‌ಪುರದ ಹಳ್ಳಿಗಳಿಗೆ ಪ್ರವಾಹದ ನೀರಿನಲ್ಲಿ ದೋಣಿ ಮೂಲಕ ಸಿಎಂ ತೆರಳಿದ್ದರು. ಆದರೆ, ಈ ವೇಳೆ ಸಿಎಂ ಪ್ರಯಾಣಿಸುತ್ತಿದ್ದ ದೋಣಿ ನೀರಿನ ರಭಸಕ್ಕೆ ಸಿಲುಕಿದೆ. ಇದರ ಪರಿಣಾಮವಾಗಿ ದೋಣಿ ಮಗುಚಿ ಬೀಳುವ ಸ್ಥಿತಿಗೆ ತಲುಪಿದೆ. ಆದರೆ, ದೋಣಿ ಮಗುಚಿ ಬೀಳುವುದರಿಂದ ಪಾರಾಗಿದೆ. ಹೀಗಾಗಿ ದೋಣಿಯಲ್ಲಿ ಸಿಎಂ ಮಾನ್​ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿಎಂ ಅವರೊಂದಿಗೆ ದೋಣಿಯಲ್ಲಿ ಹಲವರು ಪ್ರಯಾಣಿಸುತ್ತಿದ್ದರು. ಅವರೆಲ್ಲರೂ ಸಹ ಬಚಾವ್​ ಆಗಿದ್ದಾರೆ. ಈ ಘಟನೆಯ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದರ ವಿಡಿಯೋ ತುಣುಕು ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಹರಿದಾಡುತ್ತಿದೆ.

ಸಿಎಂ ಭೇಟಿ ವೇಳೆ ಸಂತ್ರಸ್ತರ ಆಕ್ರೋಶ:ಮತ್ತೊಂದೆಡೆ, ಪ್ರವಾಹ ಪೀಡಿತ ಸ್ಥಳಗಳಿಗೆ ಸಿಎಂ ಭಗವಂತ್ ಮಾನ್ ಭೇಟಿ ಮಾಡಿದಾಗ ಜನರು ಆಕ್ರೋಶವನ್ನೂ ಎದುರಿಸಿದ್ದಾರೆ. ಸಂತ್ರಸ್ತರಿಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಸಿಎಂ ಮಾನ್ ಭರವಸೆ ನೀಡಿದ್ದರೂ, ಕೆಲವರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರವಾಹದಿಂದ ಸಾಕಷ್ಟು ತೊಂದರೆ ಸಿಲುಕಿದ್ದೇವೆ. ಸ್ಥಳೀಯ ಅಧಿಕಾರಿಗಳು ಯಾವುದೇ ಸೌಲಭ್ಯಗಳನ್ನು ಕಲ್ಪಿಸುತ್ತಿಲ್ಲ. ಆಗ ಮುಖ್ಯಮಂತ್ರಿ ಭೇಟಿ ನೀಡುತ್ತಿದ್ದಾರೆ ಎಂಬ ಕಾರಣಕ್ಕೆ ಕೆಲ ಸವಲತ್ತುಗಳನ್ನು ಒದಗಿಸಲಾಗಿದೆ. ಈ ಮೊದಲು ಇಲ್ಲಿ ಏನೂ ಇರಲಿಲ್ಲ. ಅಲ್ಲದೇ, ಬೇರೆ ಗ್ರಾಮಗಳಿಂದ ಬಂದವರು ಅಥವಾ ಯಾವುದೇ ತೊಂದರೆಯಾಗದ ಜನರನ್ನು ಮಾತ್ರ ಸಿಎಂ ಅವರ ಬಳಿಗೆ ಕರೆದೊಯ್ದು ಪರಿಚಯಿಸಲಾಗಿದೆ. ನಿಜವಾದ ಸಂತ್ರಸ್ತರನ್ನು ಮುಖ್ಯಮಂತ್ರಿ ಬಳಿ ಹೋಗಲೂ ಅವಕಾಶ ನೀಡಿಲ್ಲ ಎಂದು ಕೆಲವರು ಆರೋಪ ಮಾಡಿದ್ದಾರೆ.

ಇದನ್ನೂ ಓದಿ:ಪಂಜಾಬ್​ದಲ್ಲಿ ವಿದ್ಯುತ್ ಕ್ಷಾಮ...! ಗ್ರಿಡ್‌ಗಳು ಜಲಾವೃತ, ವಿದ್ಯುತ್ ಪೂರೈಕೆಗೆ ಪಿಎಸ್‌ಪಿಸಿಎಲ್ ಶತಪ್ರಯತ್ನ

ABOUT THE AUTHOR

...view details