ಚಂಡೀಗಢ(ಪಂಜಾಬ್):ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ನಾಳೆ ಚಂಡೀಗಢದ ತಮ್ಮ ನಿವಾಸದಲ್ಲಿ ಸಪ್ತಪದಿ ತುಳಿಯಲಿದ್ದಾರೆ. ಡಾ. ಗುರುಪ್ರಿತ್ ಕೌರ್ ಜೊತೆ ಖಾಸಗಿ ಸಮಾರಂಭದಲ್ಲಿ ವಿವಾಹವಾಗಲಿದ್ದಾರೆ. ಕಾರ್ಯಕ್ರಮದಲ್ಲಿ ದೆಹಲಿ ಮುಖ್ಯಮಂತ್ರಿ, ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಭಾಗಿಯಾಗಲಿದ್ದಾರೆಂದು ಸುದ್ದಿಸಂಸ್ಥೆಯೊಂದು ವರದಿ ಪ್ರಕಟಿಸಿದೆ.
ಭಗವಂತ್ ಮಾನ್ ಈಗಾಗಲೇ 2015ರಲ್ಲಿ ಇಂದ್ರಪ್ರೀತ್ ಕೌರ್ ಜೊತೆ ಮದುವೆ ಮಾಡಿಕೊಂಡಿದ್ದರು. ಆದರೆ, ಆರು ವರ್ಷಗಳ ಹಿಂದೆ ಅವರೊಂದಿಗೆ ವಿಚ್ಛೇದನ ಪಡೆದುಕೊಂಡಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ಪಂಜಾಬ್ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಭರ್ಜರಿ ಗೆಲುವು ದಾಖಲು ಮಾಡಿದ್ದು, ಮುಖ್ಯಮಂತ್ರಿಯಾಗಿ ಭಗವಂತ್ ಮಾನ್ ಆಯ್ಕೆಯಾಗಿದ್ದಾರೆ.
ಡಾ. ಗುರುಪ್ರೀತ್ ಕೌರ್ ಎಂಬಿಬಿಎಎಸ್ ಪದವೀಧರೆ ಆಗಿದ್ದು, ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆಂದು ತಿಳಿದು ಬಂದಿದೆ. ಭಗವಂತ್ ಮಾನ್ ಅವರ ತಾಯಿ ಹಾಗೂ ಸಹೋದರಿ ಸೇರಿಕೊಂಡು ವಧುವಿನ ಆಯ್ಕೆಮಾಡಿದ್ದಾರಂತೆ. ಆರು ವರ್ಷಗಳ ಹಿಂದೆ ಭಗವಂತ್ ಮಾನ್ ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದು, ಸದ್ಯ ಅವರು ಅಮೆರಿಕಾದಲ್ಲಿ ಎರಡು ಮಕ್ಕಳೊಂದಿಗೆ ವಾಸ ಮಾಡುತ್ತಿದ್ದಾರೆ. ಭಗವಂತ್ ಮಾನ್ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿದ್ದರು.
ಡಾ. ಗುರುಪ್ರಿತ್ ಕೌರ್ ಜೊತೆ ಪಂಜಾಬ್ ಸಿಎಂ ಮದುವೆ
ಇದನ್ನೂ ಓದಿರಿ:ಗುರೂಜಿ ಒಳ್ಳೆಯವರಿದ್ದರು, ನನ್ನ ಗಂಡ ಕೊಲೆ ಮಾಡಿದ್ದೇಕೊ? ವನಜಾಕ್ಷಿ ಶಿರೂರ ಮಾತು
ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಭಗವಂತ್ ಮಾನ್ ಈಗಾಗಲೇ ಅನೇಕ ಪ್ರಮುಖ ಯೋಜನೆ ಕೈಗೊಂಡಿದ್ದು, ಕಳೆದ ಕೆಲ ದಿನಗಳ ಹಿಂದೆ ಬಜೆಟ್ ಸಹ ಮಂಡನೆ ಮಾಡಿದ್ದಾರೆ.