ಲೂಧಿಯಾನ್(ಪಂಜಾಬ್):ಕೇವಲ 10ನೇ ವರ್ಷಕ್ಕೆ ಕುಟುಂಬ ಸಾಕುವ ಜವಾಬ್ದಾರಿ ಹೊತ್ತುಕೊಂಡು ರಸ್ತೆಗಳಲ್ಲಿ ಸಾಕ್ಸ್ ಮಾರುತ್ತಿದ್ದ ಬಾಲಕನಿಗೆ ಇದೀಗ ಮುಖ್ಯಮಂತ್ರಿಗಳು ಸಹಾಯ ಮಾಡಿದ್ದು, ಕುಟುಂಬ ನಿರ್ವಹಣೆಗೆ ತಕ್ಷಣವೇ 2 ಲಕ್ಷ ರೂ. ಪರಿಹಾರ ನೀಡಿದ್ದಾರೆ.
ಲೂಧಿಯಾನದ ಟ್ರಾಫಿಕ್ ಸಿಗ್ನಲ್ಗಳಲ್ಲಿ ಬಾಲಕ ಸಾಕ್ಸ್ ಮಾರುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದನ್ನ ನೋಡಿರುವ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್, ಬಾಲಕನ ಸಂಪೂರ್ಣ ಶಿಕ್ಷಣದ ಜವಾಬ್ದಾರಿ ಹೊತ್ತುಕೊಂಡಿದ್ದು, ಕುಟುಂಬ ನಿರ್ವಹಣೆಗೆ 2 ಲಕ್ಷ ರೂ. ನೀಡಿದ್ದಾರೆ. 10 ವರ್ಷದ ಬಾಲಕ ವನ್ಶ್ ಸಿಂಗ್ ಕುಟುಂಬದ ಜವಾಬ್ದಾರಿ ಹೊತ್ತುಕೊಂಡು ಬೀದಿಗಳಲ್ಲಿ ಸಾಕ್ಸ್ ಮಾರಾಟ ಮಾಡುತ್ತಿದ್ದ.