ಬಟಿಂಡಾ(ಪಂಜಾಬ್):ಚಿಕ್ಕ ವಯಸ್ಸಿನಲ್ಲೇ ಕಾರು, ಬೈಕ್ ಅಷ್ಟೇ ಏಕೆ ಹೆಲಿಕಾಪ್ಟರ್ ಸಹ ಸಿದ್ಧಪಡಿಸಿರುವ ಅನೇಕ ಸ್ಫೂರ್ತಿದಾಯಕ ಸ್ಟೋರಿ ನಮ್ಮ ಮುಂದೆ ನಡೆದಿವೆ. ಇದೀಗ ಆ ಸಾಲಿಗೆ ಮತ್ತೋರ್ವ ವಿದ್ಯಾರ್ಥಿ ಸೇರಿಕೊಂಡಿದ್ದು, ಕೇವಲ 12ನೇ ತರಗತಿಯಲ್ಲಿ ವ್ಯಾಸಂಗ ಮಾಡ್ತಿರುವ ಯುವಕನೋರ್ವ ಮಿನಿ ಟ್ರ್ಯಾಕ್ಟರ್ ತಯಾರಿಸಿ ಎಲ್ಲರ ಗಮನ ಸೆಳೆದಿದ್ದಾನೆ.
12ನೇ ಕ್ಲಾಸ್ ವಿದ್ಯಾರ್ಥಿಯಿಂದ ಸಿದ್ಧವಾಯ್ತು 'ಮಿನಿ ಟ್ರ್ಯಾಕ್ಟರ್' ಪಂಜಾಬ್ನ ಬಟಿಂಡಾದಲ್ಲಿ 12ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಗುರ್ವಿಂದರ್ ಸಿಂಗ್, ಕೇವಲ 40 ಸಾವಿರ ರೂಪಾಯಿ ವೆಚ್ಚದಲ್ಲಿ ಈ ಟ್ರ್ಯಾಕ್ಟರ್ ಸಿದ್ಧಪಡಿಸಿದ್ದಾನೆ. ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಎಲ್ಲೆಡೆ ಲಾಕ್ಡೌನ್ ಹೇರಿಕೆ ಮಾಡಿದ್ದ ಸಂದರ್ಭದಲ್ಲಿ ವಿದ್ಯಾರ್ಥಿ ಈ ಕೆಲಸ ಮಾಡಿದ್ದು, ಪ್ರತಿ ಲೀಟರ್ ಡಿಸೇಲ್ಗೆ ಇದು 35 ಕಿಲೋ ಮೀಟರ್ ಮೈಲೇಜ್ ನೀಡಲಿದ್ದು. 4 ಕ್ವಿಂಟಲ್ ಭಾರ ಸಾಗಿಸುವ ಸಾಮರ್ಥ್ಯ ಹೊಂದಿದೆ.
ಗುರ್ವಿಂದರ್ ಸಿಂಗ್ ಚಿಕ್ಕವನಿದ್ದಾಗಿಂದಲೂ ಟ್ರ್ಯಾಕ್ಟರ್ ತಯಾರಿಸುವ ಒಲವು ಹೊಂದಿದ್ದರು. ಅದರ ಪ್ರತಿಫಲವಾಗಿ ಇದೀಗ ಈ ಮಿನಿ ಟ್ರ್ಯಾಕ್ಟರ್ ಸಿದ್ಧಗೊಂಡಿದ್ದು, ಇದಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗ್ತಿದೆ ಎಂದು ಆತ ಹೇಳಿಕೊಂಡಿದ್ದಾನೆ. ಇದಕ್ಕೋಸ್ಕರ 40 ಸಾವಿರ ರೂಪಾಯಿ ಖರ್ಚು ಮಾಡಿರುವುದಾಗಿ ಹೇಳಿಕೊಂಡಿದ್ದಾನೆ.
ಇದನ್ನೂ ಓದಿ:ವಿವಿಧ ರಾಜ್ಯಗಳ ಪ್ರವಾಸದಲ್ಲಿ ಕೆಸಿಆರ್: ಅಖಿಲೇಶ್ ಯಾದವ್ ಭೇಟಿ, ಕೇಜ್ರಿವಾಲ್, ಭಗವಂತ್ ಮಾನ್ ಜೊತೆ ಚರ್ಚೆ!
ಮಗನ ಸಾಧನೆಗೆ ತಂದೆ ಸಾಧು ಸಿಂಗ್ ಸಂತಸ ವ್ಯಕ್ತಪಡಿಸಿದ್ದು, ಈ ಟ್ರ್ಯಾಕ್ಟರ್ ಜಮೀನಿನಲ್ಲಿ ತಮ್ಮ ಕೆಲಸ ಮತ್ತಷ್ಟು ಸುಲಭಗೊಳಿಸಿದೆ ಎಂದಿದ್ದಾರೆ. ಜೊತೆಗೆ ಸದ್ಯದ ಪರಿಸ್ಥಿತಿಯಲ್ಲಿ ಮಾರುಕಟ್ಟೆಯಿಂದ ಟ್ರ್ಯಾಕ್ಟರ್ ಖರೀದಿ ತುಂಬಾ ದುಬಾರಿ, ಇದೀಗ ಕೇವಲ 40 ಸಾವಿರ ರೂಪಾಯಿ ವೆಚ್ಚದಲ್ಲಿ ನಮ್ಮ ಮಗ ಟ್ರ್ಯಾಕ್ಟರ್ ತಯಾರಿಸಿ, ನಮಗೆ ಸಹಾಯ ಮಾಡಿದ್ದಾನೆಂದು ಹೇಳಿಕೊಂಡಿದ್ದಾರೆ.