ಕರ್ನಾಟಕ

karnataka

ETV Bharat / bharat

ಕೇಂದ್ರ ಅಗ್ನಿಪಥ್​​ ಯೋಜನೆ ವಾಪಸ್​ ತೆಗೆದುಕೊಳ್ಳಲಿ: ಪಂಜಾಬ್​ ಸಿಎಂ

ರಕ್ಷಣಾ ಪಡೆಗಳಿಗೆ ಕೇಂದ್ರ ಸರ್ಕಾರದ ಹೊಸ ನೇಮಕಾತಿ ಯೋಜನೆಯ ವಿರುದ್ಧ ಮುಖ್ಯಮಂತ್ರಿ ಭಗವಂತ್ ಮಾನ್ ಹರಿಹಾಯ್ದಿದ್ದಾರೆ.

ಅಗ್ನಿಪಥ್​​ ಯೋಜನೆಯನ್ನು ವಾಪಸ್​ ತೆಗೆದುಕೊಳ್ಳಬೇಕು: ಪಂಜಾಬ್​ ಸಿಎಂ
ಅಗ್ನಿಪಥ್​​ ಯೋಜನೆಯನ್ನು ವಾಪಸ್​ ತೆಗೆದುಕೊಳ್ಳಬೇಕು: ಪಂಜಾಬ್​ ಸಿಎಂ

By

Published : Jun 17, 2022, 5:15 PM IST

Updated : Jun 17, 2022, 5:30 PM IST

ಚಂಡೀಗಢ: ಕೇಂದ್ರ ಸರ್ಕಾರದ ಅಗ್ನಿಪಥ್​​ ಯೋಜನೆಯ ವಿರುದ್ಧ ದೇಶದ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿವೆ. ವಿರೋಧ ಪಕ್ಷಗಳು ಯೋಜನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ. ಈ ಬೆನ್ನಲ್ಲೇ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಕೇಂದ್ರ ಸರ್ಕಾರ ಅಗ್ನಿಪಥ್ ವಾಪಸ್‌ ಪಡೆಯುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಪಂಜಾಬ್ ಸಿಎಂ ಟ್ವೀಟ್ ಮಾಡಿ, ಈ ಯೋಜನೆಯಿಂದ ದೇಶದ ಯುವಕರು ಮೋಸ ಹೋಗಿದ್ದಾರೆ. ದೇಶಾದ್ಯಂತ ಯುವಕರ ಕೋಪಕ್ಕೆ ಕಾರಣವಾದ ಅಗ್ನಿಪಥ್‌ ಅವಿವೇಕದ ನಿರ್ಧಾರವಾಗಿದೆ. ಕೂಡಲೇ ಈ ಯೋಜನೆಯನ್ನು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.

ಅಗ್ನಿಪಥ್​ ಯೋಜನೆಯ ವಿರುದ್ಧ ಹರಿಯಾಣ ಮತ್ತು ಬಿಹಾರದಲ್ಲಿ ಹೆಚ್ಚಿನ ಪ್ರತಿಭಟನೆಗಳು ನಡೆಯುತ್ತಿವೆ. ಇತ್ತೀಚಿನ ಬೆಳವಣಿಗೆಯಲ್ಲಿ ದಕ್ಷಿಣ ಭಾರತಕ್ಕೂ ಹೋರಾಟದ ಕಿಚ್ಚು ಹರಡುತ್ತಿದೆ.

ಇದನ್ನೂ ಓದಿ: ರಾಜೀವ್ ಹತ್ಯೆ ಪ್ರಕರಣ: ನಳಿನಿ, ರವಿಚಂದ್ರನ್ ಬಿಡುಗಡೆ ಅರ್ಜಿ ವಜಾಗೊಳಿಸಿದ ಮದ್ರಾಸ್‌ ಹೈಕೋರ್ಟ್‌

Last Updated : Jun 17, 2022, 5:30 PM IST

For All Latest Updates

ABOUT THE AUTHOR

...view details