ಕರ್ನಾಟಕ

karnataka

ETV Bharat / bharat

Punjab Election Result: ಕಾಂಗ್ರೆಸ್ ಸಿಎಂ ಅಭ್ಯರ್ಥಿಗೆ ಹಿನ್ನಡೆ.. ಆಪ್​ನ ಭಗವಂತ್​ ಮಾನ್ ನಿವಾಸದಲ್ಲಿ ಜಿಲೇಬಿ ತಯಾರಿ - ಪಂಜಾಬ್​ನಲ್ಲಿ ಆಮ್ ಆದ್ಮಿ ಪಕ್ಷ ಮುನ್ನಡೆ

ಎಕ್ಸಿಟ್ ಪೋಲ್‌ಗಳೂ ಪಂಜಾಬ್ ಮುಖ್ಯಮಂತ್ರಿಯಾಗಿ ಭಗವಂತ್ ಮಾನ್ ಪ್ರಮಾಣ ವಚನ ಸ್ವೀಕರಿಸುವುದಾಗಿ ಭವಿಷ್ಯ ನುಡಿದ ಕಾರಣದಿಂದಾಗಿ ಮಾನ್ ಅವರ ನಿವಾಸವನ್ನೂ ಹೂವಿನಿಂದ ಅಲಂಕರಿಸಲಾಗಿದೆ.

Punjab: Bhagwant Mann visits Gurdwara, Jalebi preparation begins at his residence ahead of counting
Punjab Election Result: ಕಾಂಗ್ರೆಸ್ ಸಿಎಂ ಅಭ್ಯರ್ಥಿಗೆ ಹಿನ್ನಡೆ.. ಆಪ್​ನ ಭಗವಂತ್​ ಮಾನ್ ನಿವಾಸದಲ್ಲಿ ಜಿಲೇಬಿ ತಯಾರಿ

By

Published : Mar 10, 2022, 9:43 AM IST

ಸಂಗ್ರೂರ್( ಪಂಜಾಬ್):ಮತ ಎಣಿಕೆ ಪಂಜಾಬ್​ನಲ್ಲಿ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ. ಈ ಬೆನ್ನಲ್ಲೆ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಗುರುವಾರ ಬೆಳಗ್ಗೆ ಸಂಗ್ರೂರಿನ ಗುರುದ್ವಾರ ಗುರುಸಾಗರ್ ಮಸ್ತುವನಾ ಸಾಹಿಬ್‌ಗೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದ್ದಾರೆ.

Punjab Election Result: ಕಾಂಗ್ರೆಸ್ ಸಿಎಂ ಅಭ್ಯರ್ಥಿಗೆ ಹಿನ್ನಡೆ.. ಆಪ್​ನ ಭಗವಂತ್​ ಮಾನ್ ನಿವಾಸದಲ್ಲಿ ಜಿಲೇಬಿ ತಯಾರಿ

ಈ ವೇಳೆ, ಮಾತನಾಡಿದ ಅವರು ಪಂಜಾಬ್‌ನ ಜನರು ಬದಲಾವಣೆಗಾಗಿ ಆಮ್ ಆದ್ಮಿ ಪಕ್ಷಕ್ಕೆ ಮತ ಹಾಕಿದ್ದಾರೆ ಎಂಬ ಭರವಸೆ ನಮಗಿದೆ ಎಂದು ತಿಳಿಸಿದ್ದಾರೆ. ಮತ್ತೊಂದೆಡೆ ಸಂಗ್ರೂರಿನಲ್ಲಿರುವ ಮಾನ್ ಅವರ ನಿವಾಸದಲ್ಲಿ ಜಿಲೇಬಿಗಳ ತಯಾರಿ ನಡೆಯುತ್ತಿದ್ದು, ಗೆಲುವಿನ ಭರವಸೆ ಆಪ್ ಪಕ್ಷವಿದೆ. ಎಕ್ಸಿಟ್ ಪೋಲ್‌ಗಳೂ ಪಂಜಾಬ್ ಮುಖ್ಯಮಂತ್ರಿಯಾಗಿ ಭಗವಂತ್ ಮಾನ್ ಪ್ರಮಾಣ ವಚನ ಸ್ವೀಕರಿಸುವುದಾಗಿ ಭವಿಷ್ಯ ನುಡಿದ ಕಾರಣದಿಂದಾಗಿನ ಮಾನ್ ಅವರ ನಿವಾಸವನ್ನೂ ಹೂವಿನಿಂದ ಅಲಂರಿಸಲಾಗಿದೆ. ಈಗ ಸದ್ಯದ ಟ್ರೆಂಡ್​ನಂತೆ ಆಪ್ 66 ಕ್ಷೇತ್ರಗಳಲ್ಲಿ, ಕಾಂಗ್ರೆಸ್ 18, ಅಕಾಲಿದಳ 14, ಬಿಜೆಪಿ 2 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ.

PUNJAB (102/117)
INCAAPSAD+BJP+OTH
19661421

ಆಪ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಮುನ್ನಡೆ ಸಾಧಿಸಿದ್ದು, ಪಂಜಾಬ್ ಸಿಎಂ ಅಭ್ಯರ್ಥಿ ಚರಣ್​ಜಿತ್ ಸಿಂಗ್ ಚೆನ್ನಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ಪ್ರಕಾಶ್ ಸಿಂಗ್ ಹಿನ್ನಡೆಯಲ್ಲಿದ್ದಾರೆ.

ಇದನ್ನೂ ಓದಿ:Goa Result: ಕಾಂಗ್ರೆಸ್ ಮುನ್ನಡೆ.. ಸಿಎಂಗೆ ಹಿನ್ನಡೆ: ಕಿಂಗ್ ಮೇಕರ್ ಆಗುವತ್ತ ಟಿಎಂಸಿ?

ABOUT THE AUTHOR

...view details