ಚಂಡೀಗಢ, ಪಂಜಾಬ್: ಯಾವುದೋ ಉತ್ಪನ್ನದ ಮಾರಾಟಕ್ಕಾಗಿ, ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಲು ಜಾಹೀರಾತು ನೀಡಲಾಗುತ್ತದೆ. ಆದರೆ ಪಂಜಾಬ್ನಲ್ಲಿ, ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾಗುವ ಯುವತಿ ಕೆನಡಾದ ಎನ್ಆರ್ಐ ವರನನ್ನು ಮದುವೆಯಾಗುವ ಅವಕಾಶ ಗಿಟ್ಟಿಸಿಕೊಳ್ಳಲಿದ್ದಾರೆ ಎಂಬ ಜಾಹೀರಾತು ಅಂಟಿಸಲಾಗಿದೆ. ಮಹಿಳಾ ಗೌರವಕ್ಕೆ ಧಕ್ಕೆ ತಂದ ಆರೋಪದ ಮೇಲೆ ದೂರು ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.
ಪಂಜಾಬ್‌ನ ಬಟಿಂಡಾದಲ್ಲಿ ಕೆನಡಾದ ಅನಿವಾಸಿ ಭಾರತೀಯ ವರನನ್ನು ಮದುವೆಯಾಗುವ ಅವಕಾಶವನ್ನು ಯುವತಿಯರಿಗೆ ನೀಡಲಾಗುವುದು. ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಎಂಬ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಇದು ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿದೆ.
ಅಕ್ಟೋಬರ್ 23 ರಂದು ಹೋಟೆಲ್‌ನಲ್ಲಿ ಸುಂದರ ಯುವತಿಯರ ಸ್ಪರ್ಧೆ ಆಯೋಜಿಸಲಾಗಿದೆ. ಇಲ್ಲಿ ಗೆದ್ದ ಯುವತಿ ಕೆನಡಾದ ಅನಿವಾಸಿ ಭಾರತೀಯನ ವರಿಸುವ ಅವಕಾಶ ಪಡೆಯಲಿದ್ದಾಳೆ ಎಂದೆಲ್ಲಾ ವಿಳಾಸ ಸಹಿತ ಜಾಹೀರಾತು ನೀಡಲಾಗಿದೆ. ಇದರ ವಿರುದ್ಧ ದೂರು ಕೇಳಿ ಬಂದ ಬಳಿಕ ಪರಿಶೀಲನೆ ನಡೆಸಿದ ಪೊಲೀಸರು ಮಹಿಳಾ ಅಸಭ್ಯ ಪ್ರಾತಿನಿಧ್ಯ (ನಿರ್ವಹಣೆ) ಕಾಯ್ದೆ-1986 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಈ ಪೋಸ್ಟರ್ ಅಂಟಿಸಿದ ತಂದೆ- ಮಗನನ್ನು ಬಂಧಿಸಿದೆ.
ಪಂಜಾಬ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಬಲ್ಜಿತ್ ಕೌರ್ ಕೂಡ ಘಟನೆಯನ್ನು ಖಂಡಿಸಿದ್ದಾರೆ. ಸೌಂದರ್ಯ ಸ್ಪರ್ಧೆ ನಡೆಸಿ ಆಕೆಗೆ ವರನನ್ನು ಆಫರ್ ಮಾಡುವುದು ಮತ್ತು ನಿರ್ದಿಷ್ಟ ಜಾತಿಯನ್ನು ಗುರುತಿಸಿರುವುದು ಅಕ್ಷಮ್ಯ ಎಂದು ಹೇಳಿದ್ದಾರೆ.
ಓದಿ:18 ಶಾಸಕರು ಸೇರಿ 25ಕ್ಕೂ ಹೆಚ್ಚು ಪ್ರಭಾವಿಗಳಿಗೆ ಹನಿಟ್ರ್ಯಾಪ್: ರಾಜಕೀಯ ಬಿರುಗಾಳಿ ಎಬ್ಬಿಸಿದ ಬ್ಲ್ಯಾಕ್‌ಮೇಲರ್ ದಂಪತಿ