ಕರ್ನಾಟಕ

karnataka

ETV Bharat / bharat

100 ದಿನಗಳಲ್ಲಿ ಮೂವರು DGP ; ನಮೋ ಭದ್ರತಾ ಲೋಪ ಬೆನ್ನಲ್ಲೇ ಪಂಜಾಬ್​​ನಲ್ಲಿ ನೂತನ ಡಿಜಿಪಿ ನೇಮಕ

Punjab new DGP : ಪಂಜಾಬ್​ ಡಿಜಿಪಿ ರೇಸ್​​ನಲ್ಲಿ ದಿನಕರ್ ಗುಪ್ತಾ, ಪ್ರಬೋಧ್ ಕುಮಾರ್​ ಹಾಗೂ ಭಾವ್ರಾ ಅವರ ಹೆಸರು ಕೇಳಿ ಬಂದಿತ್ತು. ಅಂತಿಮವಾಗಿ ವಿಕೆ ಭಾವ್ರಾ ಆಯ್ಕೆಯಾಗಿದ್ದು, ಮುಂದಿನ ಎರಡು ವರ್ಷಗಳ ಕಾಲ ಇವರ ಅಧಿಕಾರದ ಅವಧಿ ಇರಲಿದೆ..

DGP of Punjab
DGP of Punjab

By

Published : Jan 8, 2022, 7:31 PM IST

ಚಂಡೀಗಢ(ಪಂಜಾಬ್​​): ಪಂಜಾಬ್​​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭದ್ರತಾ ಲೋಪ ಎದುರಿಸಿರುವ ಬೆನ್ನಲ್ಲೇ ಇದೀಗ ನೂತನ ಡಿಜಿಪಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಪಂಜಾಬ್​ ಚುನಾವಣೆ ದಿನಾಂಕ ಘೋಷಣೆಯಾಗುವುದಕ್ಕೂ ಸ್ವಲ್ಪ ಗಂಟೆ ಮುಂಚಿತವಾಗಿ ಈ ಮಹತ್ವದ ನಿರ್ಧಾರ ಹೊರ ಬಿದ್ದಿದೆ.

ಪಂಜಾಬ್​​ ನೂತನ ಪೊಲೀಸ್​ ಮುಖ್ಯಸ್ಥರಾಗಿ ಇದೀಗ ವಿರೇಶ್​​ ಕುಮಾರ್​ ಭಾವ್ರಾ ನೇಮಕಗೊಂಡಿದ್ದಾರೆ. ಇವರು 1987ರ ಬ್ಯಾಚ್​ನ ಐಪಿಎಸ್​​​​ ಅಧಿಕಾರಿಯಾಗಿದ್ದಾರೆ.

ಕ್ಯಾಪ್ಟನ್​ ಅಮರೀಂದರ್​ ಸಿಂಗ್​​ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ನೂತನ ಸಿಎಂ ಆಗಿರುವ ಚರಣ್​ಜಿತ್​ ಸಿಂಗ್​ ಚನ್ನಿ ಅಧಿಕಾರ ಅವಧಿಯಲ್ಲಿ ಮೂರನೇ ಸಲ(100 ದಿನಗಳಲ್ಲಿ) ಡಿಜಿಪಿ ಬದಲಾವಣೆ ಮಾಡಲಾಗಿದೆ. ನಿರ್ಗಮಿತ ಪಂಜಾಬ್ ಡಿಜಿಪಿ ಸಿದ್ಧಾರ್ಥ್ ಚಟ್ಟೋಪಾಧ್ಯಾಯ ಇದೀಗ ವಿಕೆ ಭಾವ್ರಾ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದ್ದಾರೆ.

ಪಂಜಾಬ್​ ಡಿಜಿಪಿ ರೇಸ್​​ನಲ್ಲಿ ದಿನಕರ್ ಗುಪ್ತಾ, ಪ್ರಬೋಧ್ ಕುಮಾರ್​ ಹಾಗೂ ಭಾವ್ರಾ ಅವರ ಹೆಸರು ಕೇಳಿ ಬಂದಿತ್ತು. ಅಂತಿಮವಾಗಿ ವಿಕೆ ಭಾವ್ರಾ ಆಯ್ಕೆಯಾಗಿದ್ದು, ಮುಂದಿನ ಎರಡು ವರ್ಷಗಳ ಕಾಲ ಇವರ ಅಧಿಕಾರದ ಅವಧಿ ಇರಲಿದೆ.

ಕಳೆದ ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಪಂಜಾಬ್​ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಭದ್ರತಾ ಲೋಪ ಎದುರಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಡಿಜಿಪಿ ಆಗಿದ್ದ ಸಿದ್ಧಾರ್ಥ್ ಚಟ್ಟೋಪಾಧ್ಯಾಯ ಸೇರಿದಂತೆ 13 ಉನ್ನತಾಧಿಕಾರಿಗಳಿಗೆ ನೋಟಿಸ್​ ಜಾರಿ ಮಾಡಲಾಗಿತ್ತು.

ABOUT THE AUTHOR

...view details