ಹೈದರಾಬಾದ್: ಸ್ಯಾಂಡಲ್ವುಡ್ನ ಮೇರುನಟ ಪುನೀತ್ ರಾಜ್ಕುಮಾರ್(46) ಮರಳಿ ಬಾರದೂರಿಗೆ ಪಯಣ ಬೆಳೆಸಿದ್ದಾರೆ. ಅವರ ದಿಢೀರ್ ನಿಧನಕ್ಕೆ ಕನ್ನಡ ಚಿತ್ರರಂಗ ಮಾತ್ರವಲ್ಲದೇ ಬಾಲಿವುಡ್ ಸೇರಿದಂತೆ ಪರಭಾಷೆಯ ಚಿತ್ರರಂಗದ ಕಲಾವಿದರು ಕಂಬನಿ ಮಿಡಿದಿದ್ದಾರೆ.
ಪವರ್ ಸ್ಟಾರ್ನ ಅಕಾಲಿಕ ನಿಧನಕ್ಕೆ ಬಾಲಿವುಡ್ನ ಅನಿಲ್ ಕಪೂರ್, ಅಜಯ್ ದೇವಗನ್, ಅಭಿಷೇಕ್ ಬಚ್ಚನ್, ತಾಪ್ಸಿ ಪನ್ನು ಸೇರಿದಂತೆ ಅನೇಕರು ಟ್ವೀಟ್ ಮಾಡಿದ್ದಾರೆ.
ಅನಿಲ್ ಕಪೂರ್
ನಟನ ನಿಧನಕ್ಕೆ ಕಂಬನಿ ಮಿಡಿದಿರುವ ಬಾಲಿವುಡ್ನ ಹಿರಿಯ ನಟ ಅನಿಲ್ ಕಪೂರ್, ಸಾವಿನ ಸುದ್ದಿ ಆಘಾತಕಾರಿ ಮತ್ತು ಅತ್ಯಂತ ದುಃಖಕರ. ಮೃತನ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ದೇವರು ನೀಡಲಿ. ಹೃದಯಪೂರ್ವಕ ಸಂತಾಪ ಎಂದಿದ್ದಾರೆ.
ಅಭಿಷೇಕ್ ಬಚ್ಚನ್
ಹೃದಯವಿದ್ರಾವಕ ಸುದ್ದಿ. ಪುನೀತ್ ರಾಜ್ ಕುಮಾರ್ ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ನನ್ನ ಸಂತಾಪಗಳು. ನಿಮ್ಮನ್ನೂ ಮಿಸ್ ಮಾಡಿಕೊಳ್ಳಲಿದ್ದೇವೆ.
ಸಂಜಯ್ ದತ್
ನಾನು ಭೇಟಿಯಾಗಿರುವ ಅತ್ಯಂತ ಕರುಣಾಮಯಿ ಮತ್ತು ಸರಳ ವ್ಯಕ್ತಿಗಳಲ್ಲಿ ನೀವು ಪ್ರಮುಖರು. ಜಗತ್ತು ಮತ್ತೊಂದು ರತ್ನ ಕಳೆದುಕೊಂಡಿದೆ. ನಿಮ್ಮ ಕುಟುಂಬ ಹಾಗೂ ಸ್ನೇಹಿತರಿಗೆ ನನ್ನ ಹೃತ್ಪೂರ್ವಕ ಸಂತಾಪ.