ಪವರ್ಸ್ಟಾರ್ ಪುನೀತ್ ರಾಜಕುಮಾರ್ ವಿಧಿವಶರಾದ ದಿನದಿಂದಲೂ ಕನ್ನಡಿಗರಲ್ಲಿ ದುಃಖ ಮಡುಗಟ್ಟಿದೆ. ಪುನೀತ್ ಅಗಲಿಕೆಗೆ ಸ್ಯಾಂಡಲ್ವುಡ್ ಮಾತ್ರವಲ್ಲದೇ ಬಾಲಿವುಡ್, ಟಾಲಿವುಡ್, ಕಾಲಿವುಡ್ ನಟರೂ ಕೂಡಾ ಸಂತಾಪ ಸೂಚಿಸಿ, ಭಾವುಕರಾಗಿದ್ದಾರೆ.
ಈಗ ತೆಲುಗು ಕಾಮಿಡಿ ರಿಯಾಲಿಟಿ ಶೋ 'ಶ್ರೀದೇವಿ ಡ್ರಾಮಾ ಕಂಪನಿ' ಪುನೀತ್ ರಾಜಕುಮಾರ್ಗೆ ಶ್ರದ್ಧಾಂಜಲಿ ಸಲ್ಲಿಸಿದೆ. ಮುಂದಿನ ಭಾನುವಾರ ಪ್ರಸಾರವಾಗಲಿರುವ ಎಪಿಸೋಡ್ ಅನ್ನು ಪುನೀತ್ ರಾಜಕುಮಾರ್ಗೆ ಅರ್ಪಿಸಲಾಗಿದೆ.