ಪುಣೆ(ಮಹಾರಾಷ್ಟ್ರ) :ಕಳೆದ ಕೆಲ ದಿನಗಳ ಹಿಂದೆ ಯುವತಿಯೋರ್ವಳ ಮೇಲೆ ಅತ್ಯಾಚಾರವೆಸಗಿ, ಖಾಸಗಿ ಭಾಗಕ್ಕೆ ರಾಡ್ ಹಾಕಿರುವ ಘಟನೆ ಮಾಸುವ ಮೊದಲೇ ಮಹಾರಾಷ್ಟ್ರದಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. 19 ವರ್ಷದ ವಿವಾಹಿತ ಮಹಿಳೆಯೋರ್ವಳ ಮೇಲೆ ಗಂಡನ ಸಂಬಂಧಿಕರು ಅತ್ಯಾಚಾರವೆಸಗಿ, ತದನಂತರ ಭೀಕರವಾಗಿ ಕೊಲೆ ಮಾಡಿದ್ದಾರೆ.
ಪುಣೆಯ ಮೌಜೆ ಎಂಬಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ವಿವಾಹಿತ ಮಹಿಳೆ ಗಂಡನ ಸಂಬಂಧಿಕರೊಂದಿಗೆ ಪಕ್ಕದೂರಿನ ದೇವಸ್ಥಾನಕ್ಕೆ ತೆರಳಿರುವ ಸಂದರ್ಭದಲ್ಲಿ ದುಷ್ಕೃತ್ಯವೆಸಗಲಾಗಿದೆ. ಘಟನೆಯಲ್ಲಿ ಗಂಡನ ಸಂಬಂಧಿಕರ ಸ್ನೇಹಿತನೋರ್ವ ಭಾಗಿಯಾಗಿದ್ದಾನೆ.