ಕರ್ನಾಟಕ

karnataka

ETV Bharat / bharat

ಹಳಿ ತಪ್ಪಿದ ರೈಲು.. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರು - ಲೋನಾವಾಲಾ ರೈಲ್ವೆ ನಿಲ್ದಾಣ

ಪುಣೆಯ ಲೋನಾವಾಲಾ ರೈಲ್ವೆ ನಿಲ್ದಾಣದಲ್ಲಿ ವಿಶೇಷ ರೈಲಿನ ಎರಡು ಬೋಗಿಗಳು ಹಳಿ ತಪ್ಪಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

f Indore-Daund
f Indore-Daund

By

Published : Sep 27, 2021, 10:45 AM IST

ಪುಣೆ(ಮಹಾರಾಷ್ಟ್ರ): ಇಂದೋರ್-ದೌಂಡ್ ಮಾರ್ಗದಲ್ಲಿ ಸಂಚರಿಸುವ ವಿಶೇಷ ರೈಲಿನ ಎರಡು ಬೋಗಿಗಳು ಹಳಿ ತಪ್ಪಿವೆ. ಲೋನಾವಾಲಾ ನಿಲ್ದಾಣದಲ್ಲಿ ಇಂದು ಬೆಳಗ್ಗೆ 8 ಗಂಟೆಗೆ ಈ ಘಟನೆ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಹಳಿ ತಪ್ಪಿದ ರೈಲು

ಘಟನಾ ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ಭೇಟಿ, ನೀಡಿ ಪರಿಶೀಲನೆ ನಡೆಸಿದ್ದು, ದುರಸ್ತಿ ಕಾರ್ಯ ನಡೆಸುತ್ತಿದ್ದಾರೆ. ಈ ರೈಲು ಹಳಿ ತಪ್ಪಿರುವುದರಿಂದ ಮುಂಬೈ - ಪುಣೆ ಮಾರ್ಗದ ರೈಲು ಸಂಚಾರಕ್ಕೆ ಅಡ್ಡಿಯಾಗುತ್ತಿದೆ.

ABOUT THE AUTHOR

...view details