ಪುಣೆ, ಮಹಾರಾಷ್ಟ್ರ:ಕೋವಿಡ್ ಎದುರಿಸಲು ಮುಂಚೂಣಿಯಲ್ಲಿ ತೊಡಗಿಸಿಕೊಂಡಿರುವ ವೈದ್ಯರು, ಶುಶ್ರೂಷಕರಿಗೆ ರಿಲೀಫ್ ನೀಡುವ ಸಂಶೋಧನೆಯೊಂದು ಜರುಗಿದ್ದು, ಪಿಪಿಇ ಕಿಟ್ ಧರಿಸಿ ಅತಿ ಉಷ್ಣತೆಯಲ್ಲಿ ಕಷ್ಟ ಪಡುವುದು ತಪ್ಪುತ್ತದೆ.
ಹೌದು, ಪುಣೆಯ 19 ವರ್ಷ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಯಾದ ನಿಹಾಲ್ ಸಿಂಗ್ ಆದರ್ಶ್ ಎಂಬಾತ ಪಿಪಿಇ ಕಿಟ್ನಲ್ಲಿ ಧರಿಸಬಹುದಾದ ವೆಂಟಿಲೇಟರ್ ಅನ್ನು ಅಭಿವೃದ್ಧಿಪಡಿಸಿದ್ದು, ಪಿಪಿಇ ಕಿಟ್ ಧರಿಸಿ, ಅದರೊಳಗೆ ಭಾರೀ ಉಷ್ಣತೆ ಜೊತೆಗೆ ಆಯಾಸ ಅನುಭವಿಸುವವರಿಗೆ ರಿಲೀಫ್ ನೀಡಲಿದೆ.
ಈ ಸಂಶೋಧನೆ ಹಿಂದೆ ಅವರ ತಾಯಿಯ ಬೆಂಬಲವಿದ್ದು, ಆಕೆ ವೃತ್ತಿಯಲ್ಲಿ ವೈದ್ಯರಾಗಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ನಿಹಾಲ್ ಸಿಂಗ್ ಪಿಪಿಇ ಕಿಟ್ ಧರಿಸಿ ಕೆಲಸ ಮಾಡುವುದು ಎಷ್ಟು ಕಷ್ಟ ಎಂಬುದು ನನ್ನ ತಾಯಿಗೆ ಗೊತ್ತು. ಕೆಲವೊಮ್ಮೆ ಬೆವರು ಹೆಚ್ಚಾಗಿ ಬರುವುದರಿಂದ ಹಲವು ರೀತಿಯ ಸೋಂಕಿಗೆ ಕಾರಣವಾಗುತ್ತದೆ. ಇದರಿಂದಾಗಿ ಪಿಪಿಇಗೆ ಅಳವಡಿಸಬಹುದಾದ ಕೋವ್-ಟೆಕ್ ವೆಂಟಿಲೇಟರ್ ಸಿಸ್ಟಮ್ ಅನ್ನು ಅಭಿವೃದ್ಧಿ ಪಡಿಸಲು ಪ್ರೇರಣೆಯಾಯಿತು ಎಂದಿದ್ದಾನೆ.