ಕರ್ನಾಟಕ

karnataka

ETV Bharat / bharat

'ದಿ ಕಾಶ್ಮೀರ್ ಫೈಲ್- ಒಂದು ಅರ್ಧ ಸತ್ಯ' ಕಾರ್ಯಕ್ರಮಕ್ಕೆ ಕಾಶ್ಮೀರಿ ಪಂಡಿತರಿಗೆ ಪ್ರವೇಶ ನಿರಾಕರಣೆ - ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಕುರಿತು ಮಾಹಿತಿ

ಪುಣೆ ಮೂಲದ ಯುವಕ್ ಕ್ರಾಂತಿ ದಳ 'ದಿ ಕಾಶ್ಮೀರ್ ಫೈಲ್ಸ್ - ಏಕ್ ಅರ್ಧಸತ್ಯ್​​' ಎಂಬ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು, ಆ ಕಾರ್ಯಕ್ರಮಕ್ಕೆ ತೆರಳಲು ಕಾಶ್ಮೀರಿ ಪಂಡಿತರಿಗೆ ಪೊಲೀಸರು ತಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ..

Pune: Police stop Kashmiri Pandits from attending an event on 'The Kashmir Files'
'ದಿ ಕಾಶ್ಮೀರ್ ಫೈಲ್- ಒಂದು ಅರ್ಧ ಸತ್ಯ' ಕಾರ್ಯಕ್ರಮಕ್ಕೆ ಕಾಶ್ಮೀರಿ ಪಂಡಿತರಿಗೆ ಪ್ರವೇಶ ನಿರಾಕರಣೆ

By

Published : Apr 8, 2022, 12:36 PM IST

ಪುಣೆ, ಮಹಾರಾಷ್ಟ್ರ :ಪುಣೆಯಲ್ಲಿರುವ ಕಾಶ್ಮೀರಿ ಪಂಡಿತ್ ಸಮುದಾಯದ ಇಬ್ಬರನ್ನು ಪೊಲೀಸರು 'ದಿ ಕಾಶ್ಮೀರ್ ಫೈಲ್ಸ್' ಚಿತ್ರಕ್ಕೆ ಸಂಬಂಧಿಸಿದ ಕಾರ್ಯಕ್ರಮಕ್ಕೆ ಹೋಗದಂತೆ ತಡೆಯಲಾಗಿದೆ ಎಂದು ಇಂಡಿಯಾ ಫಾರ್ ಕಾಶ್ಮೀರ್ ಸಂಘಟನೆಯ ರಾಷ್ಟ್ರೀಯ ಸಂಯೋಜಕ ರೋಹಿತ್ ಕಚ್ರೂ ಆರೋಪಿಸಿದ್ದಾರೆ.

'ದಿ ಕಾಶ್ಮೀರ್ ಫೈಲ್ಸ್-ಏಕ್ ಅರ್ಧಸತ್ಯ್​​' ಎಂಬ ಕಾರ್ಯಕ್ರಮವನ್ನು ಪುಣೆ ಮೂಲದ ಯುವಕ್ ಕ್ರಾಂತಿ ದಳ ಎಂಬ ಸಂಘಟನೆ ಆಯೋಜನೆ ಮಾಡಿತ್ತು. ಈ ಕಾರ್ಯಕ್ರಮದಲ್ಲಿ ಇತಿಹಾಸ ತಜ್ಞ ಅಶೋಕ್ ಕುಮಾರ್ ಪಾಂಡೆ ಮುಖ್ಯ ಭಾಷಣ ಮಾಡಲಿದ್ದು, ಈ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಗಿಲ್ಲ ಎಂದು ರೋಹಿತ್ ಕಚ್ರೂ ಆರೋಪಿಸಿದ್ದಾರೆ.

ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಸುಳ್ಳುಗಳಿಂದ ಕೂಡಿದೆ ಎಂದು ಆರೋಪಿಸಿ 'ದಿ ಕಾಶ್ಮೀರ್ ಫೈಲ್ಸ್ - ಏಕ್ ಅರ್ಧಸತ್ಯ್​​' ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಕಾಶ್ಮೀರಿ ಪಂಡಿತ್ ಸಮುದಾಯದ ಸದಸ್ಯರು ಕಾಶ್ಮೀರಿ ಪಂಡಿತರ ಸಮಸ್ಯೆಗಳಿಗೆ ಸಂಬಂಧಿಸಿದ ಕೆಲವು ಪ್ರಶ್ನೆಗಳನ್ನು ಕೇಳಲು ಕಾರ್ಯಕ್ರಮಕ್ಕೆ ಹಾಜರಾಗಲು ಬಯಸುತ್ತಾರೆ.

ಸಿನಿಮಾ ಅರ್ಧಸತ್ಯವಾಗಿದ್ದರೆ ಕಾರ್ಯಕ್ರಮದ ಆಯೋಜಕರು ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡಬೇಕು. ನಾನು ಕಾರ್ಯಕ್ರಮಕ್ಕೆ ಹಾಜರಾಗಲು ಬಯಸಿದ್ದೆ. ಆದರೆ, ಪೊಲೀಸರು ನಮಗೆ ಅವಕಾಶ ನೀಡಿಲ್ಲ ಎಂದು ರೋಹಿತ್ ಕಚ್ರೂ ಹೇಳಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಕಾರಣಕ್ಕಾಗಿ ಇಂಡಿಯಾ ಫಾರ್ ಕಾಶ್ಮೀರ್ ಸಂಘಟನೆಯ ಸದಸ್ಯರಿಗೆ ಕಾರ್ಯಕ್ರಮಕ್ಕೆ ಹಾಜರಾಗಲು ಅವಕಾಶ ನೀಡಲಿಲ್ಲ ಎಂದು ಪುಣೆ ಪೊಲೀಸರು ತಿಳಿಸಿದ್ದಾರೆ.

ಕೊತ್ರೂಡ್ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಮಹೇಂದ್ರ ಜಗತಾಪ್ ಮಾತನಾಡಿ, ಕಾನೂನು ಮತ್ತು ಸುವ್ಯವಸ್ಥೆ ಹದಗೆಡುವುದನ್ನು ತಪ್ಪಿಸಲು, ನಾವು ಕಾರ್ಯಕ್ರಮಕ್ಕೆ ಹೋಗದಂತೆ ನಾವು ಕೇಳಿದ್ದೇವೆ ಮತ್ತು ರೋಹಿತ್ ಕಚ್ರೂಗೆ ಸೆಕ್ಷನ್ 149ರ ಅಡಿಯಲ್ಲಿ ನೋಟಿಸ್ ನೀಡಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ:ದೇವರನಾಡಲ್ಲಿ ಅಮಾನವೀಯತೆ : ಬೈಕ್ ಕಳವು ಶಂಕೆಯಲ್ಲಿ ಯುವಕನ ಕೊಂದ ಜನರ ಗುಂಪು

ಗುರುವಾರದಂದು, ಕಾಶ್ಮೀರಿ ಪಂಡಿತ್ ಸಮುದಾಯದ ಸದಸ್ಯರು ಮತ್ತು ಇತರ ಸಂಘಟನೆಗಳು 'ದಿ ಕಾಶ್ಮೀರ್ ಫೈಲ್ಸ್ - ಏಕ್ ಅರ್ಧಸತ್ಯ್​​' ಈವೆಂಟ್ ಅನ್ನು ರದ್ದುಗೊಳಿಸುವಂತೆ ಕೊತ್ರುಡ್ ಪೊಲೀಸ್ ಠಾಣೆಗೆ ಪತ್ರ ಬರೆದಿದ್ದವು. ಈ ಕಾರ್ಯಕ್ರಮದ ಮೂಲಕ ಸುಳ್ಳು ಸಂಗತಿಗಳನ್ನು ಹರಡಲಾಗುತ್ತದೆ. ಸಮುದಾಯದ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಪತ್ರದಲ್ಲಿ ಉಲ್ಲೇಖ ಮಾಡಲಾಗಿತ್ತು.

ABOUT THE AUTHOR

...view details