ಕರ್ನಾಟಕ

karnataka

ETV Bharat / bharat

ಕೇಂದ್ರ ಸಚಿವ ರಾಣೆ ಪುತ್ರ, ಶಾಸಕ ಮತ್ತು ಶಾಸಕನ ಪತ್ನಿ ವಿರುದ್ಧ ಲುಕ್​ಔಟ್ ನೋಟಿಸ್​​ - ಪಾರ್ಕ್‌ಲೈನ್ ಪ್ರಾಪರ್ಟೀಸ್ ಲಿಮಿಟೆಡ್

ನಿತೀಶ್ ರಾಣೆಯ ಪಾರ್ಕ್‌ಲೈನ್ ಪ್ರಾಪರ್ಟೀಸ್ ಲಿಮಿಟೆಡ್ ಕಂಪನಿಯು ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಹಣಕಾಸು ಸಂಸ್ಥೆಯಿಂದ ಸುಮಾರು 25 ಕೋಟಿ ರೂಪಾಯಿ ಸಾಲ ಪಡೆದಿತ್ತು. ಸಾಲವನ್ನು ಮರುಪಾವತಿ ಮಾಡದ ಆರೋಪ ಹಿನ್ನೆಲೆಯಲ್ಲಿ ಅವರ ವಿರುದ್ಧ ದೂರು ದಾಖಲಾಗಿದೆ.

Pune Police issues lookout circular against Nitesh Rane, Neelam Rane
ಕೇಂದ್ರ ಸಚಿವ ರಾಣೆ ಪುತ್ರ, ಶಾಸಕ ಮತ್ತು ಶಾಸಕನ ಪತ್ನಿ ವಿರುದ್ಧ ಲುಕ್​ಔಟ್ ನೋಟಿಸ್​​

By

Published : Sep 11, 2021, 7:39 AM IST

Updated : Sep 11, 2021, 8:11 AM IST

ಪುಣೆ(ಮಹಾರಾಷ್ಟ್ರ):ಕೇಂದ್ರ ಸಚಿವ ನಾರಾಯಣ ರಾಣೆ ಅವರ ಪುತ್ರ ಮತ್ತು ಶಾಸಕ ನಿತೀಶ್ ರಾಣೆ ಮತ್ತು ಶಾಸಕರ ಪತ್ನಿ ನೀಲಂ ರಾಣೆ ವಿರುದ್ಧ ಮಹಾರಾಷ್ಟ್ರದ ಪುಣೆ ಪೊಲೀಸರು ಲುಕ್​ಔಟ್ ನೋಟಿಸ್ ಜಾರಿ ಮಾಡಿದ್ದಾರೆ. ಖಾಸಗಿ ಹಣಕಾಸು ಸಂಸ್ಥೆಯೊಂದು ದೂರು ನೀಡಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಶಾಸಕ ನಿತೀಶ್ ರಾಣೆ ಮತ್ತು ಶಾಸಕರ ಪತ್ನಿ ನೀಲಂ ರಾಣೆ ಖಾಸಗಿ ಹಣಕಾಸು ಸಂಸ್ಥೆಯಿಂದ ಸುಮಾರು 65 ಕೋಟಿ ರೂಪಾಯಿ ಮೊತ್ತದ ಸಾಲವನ್ನು ತೆಗೆದುಕೊಂಡು ಮರುಪಾವತಿ ಮಾಡದ ಆರೋಪದಲ್ಲಿ ದೂರು ದಾಖಲಾಗಿದೆ. ಇದರಿಂದಾಗಿ ಅವರ ವಿರುದ್ಧ ಲುಕ್​ಔಟ್ ನೋಟಿಸ್ ಹೊರಡಿಸಲಾಗಿದೆ ಎಂದು ಮಹಾರಾಷ್ಟ್ರ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಹೇಳಿದ್ದಾರೆ.

ನಿತೀಶ್ ರಾಣೆಯ ಪಾರ್ಕ್‌ಲೈನ್ ಪ್ರಾಪರ್ಟೀಸ್ ಲಿಮಿಟೆಡ್ ಕಂಪನಿಯು ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಹಣಕಾಸು ಸಂಸ್ಥೆಯಿಂದ ಸುಮಾರು 25 ಕೋಟಿ ರೂಪಾಯಿ ಸಾಲ ಪಡೆದಿತ್ತು. ಸಾಲವನ್ನು ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಅವರ ವಿರುದ್ಧ ದೂರು ದಾಖಲಾಗಿದೆ. ನಿತೀಶ್ ಪತ್ನಿ ನೀಲಂ ರಾಣೆ ಕೂಡಾ ಸಾಲಕ್ಕೆ ಸಹ ಅರ್ಜಿದಾರರಾಗಿದ್ದರು ಎಂದು ಲುಕ್​​ಔಟ್​ ನೋಟಿಸ್​ನಲ್ಲಿ ಉಲ್ಲೇಖವಾಗಿದೆ.

ಇದನ್ನು ಹೊರತುಪಡಿಸಿ ಮತ್ತೊಂದು ಕಂಪನಿ ನಿತೀಶ್ ರಾಣೆಗೆ ಕೋಟ್ಯಂತರ ರೂಪಾಯಿ ಸಾಲ ನೀಡಿದ್ದು, ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 3ರಂದೇ ಪುಣೆ ಪೊಲೀಸರು ಕೇಂದ್ರ ಸರ್ಕಾರ ಮತ್ತು ರಾಜ್ಯ ಗೃಹ ಇಲಾಖೆಯ ಸೂಚನೆ ಮೇರೆಗೆ ಲುಕ್​ಔಟ್ ನೋಟಿಸ್ ಹೊರಡಿಸಿದೆ.

ಇದನ್ನೂ ಓದಿ:ಜಗನ್ನಾಥ ದೇವಸ್ಥಾನದ ಎಂಟ್ರಿಗೆ ನಕಲಿ RTPCR ವರದಿ ಮಾಡಿಕೊಡುತಿದ್ದ 12 ಜನರ ಬಂಧನ

Last Updated : Sep 11, 2021, 8:11 AM IST

ABOUT THE AUTHOR

...view details