ಕರ್ನಾಟಕ

karnataka

ETV Bharat / bharat

ಮಾನವನನ್ನೇ ಹೊರುವ ಡ್ರೋನ್ ತಯಾರು: ಸೇನೆಗೆ ನೀಡಲು ಮುಂದಾದ ಸಂಸ್ಥೆ

ಹೆವಿ-ಲಿಫ್ಟ್ ಯುಟಿಲಿಟಿ ಡ್ರೋನ್ ಅನ್ನು ತಯಾರಿಸಲಾಗಿದ್ದು, ಅದಕ್ಕೆ 'ವರುಣ' ಎಂದು ಹೆಸರಿಡಲಾಗಿದೆ. ಇದು ಮಾನವನನ್ನು ಹೊತ್ತೊಯ್ಯಬಲ್ಲದು.

ಮಲ್ಟಿ ಕಾಪ್ಟರ್ ಡ್ರೋನ್
ಮಲ್ಟಿ ಕಾಪ್ಟರ್ ಡ್ರೋನ್

By

Published : Aug 7, 2022, 8:45 PM IST

ಪುಣೆ(ಮಹಾರಾಷ್ಟ್ರ) : ಚಕಾನ್ ಮೂಲದ ರಕ್ಷಣಾ ಕಂಪನಿಯು ಹೆವಿ-ಲಿಫ್ಟ್ ಯುಟಿಲಿಟಿ ಡ್ರೋನ್ ಅನ್ನು ತಯಾರಿಸಿದ್ದು, ಅದಕ್ಕೆ 'ವರುಣ' ಎಂದು ಹೆಸರಿಡಲಾಗಿದೆ. ಇದು ಮಾನವನನ್ನು ಹೊತ್ತೊಯ್ಯಬಲ್ಲದು ಹಾಗೆ ಶೀಘ್ರದಲ್ಲೇ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳ್ಳಲಿದೆ.

ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲ ಸ್ವಾಯತ್ತ ಮಲ್ಟಿ-ಕಾಪ್ಟರ್ ಡ್ರೋನ್ ಆಗಿರುವ ‘ವರುಣ’ದ ಪರ್ಸನಲ್ ಏರ್ ವೆಹಿಕಲ್‌ನ ಡೆಮೊವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತೋರಿಸಲಾಗಿದೆ.

ವರುಣವನ್ನು ಚಕಾನ್ ಮೂಲದ ಸಾಗರ್ ಡಿಫೆನ್ಸ್ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ (SDE) ವಿನ್ಯಾಸಗೊಳಿಸಿದ್ದು, ಇದರ ಪ್ರಾಯೋಗಿಕ ಹಾರಾಟ ಸಹ ಯಶಸ್ಸು ಕಂಡಿದೆ. ಮಾನವನನ್ನು ಹೊರುವುದರ ಜೊತೆಗೆ ಇತರೆ ತೂಕದ ವಸ್ತುಗಳನ್ನೂ ಸಹ ಈ ಡ್ರೋನ್​ ಹೊರಲಿದೆ. ಡ್ರೋನ್ ಅನ್ನು ದೂರದಿಂದಲೇ ನಿಯಂತ್ರಿಸಬಹುದಾಗಿದೆ. ಜೊತೆಗೆ ಪೂರ್ವನಿರ್ಧರಿತ ಮಾರ್ಗಗಳಲ್ಲಿ ಸ್ವಯಂಚಾಲಿತವಾಗಿಯೂ ಇದನ್ನು ಹಾರಿಸಬಹುದು.

ಮಾನವನನ್ನೇ ಹೊರುವ ಡ್ರೋನ್ ತಯಾರು: ಸೇನೆಗೆ ನೀಡಲು ಮುಂದಾದ ಸಂಸ್ಥೆ

ಡ್ರೋನ್ 130 ಕೆಜಿಯವರೆಗಿನ ಪೇಲೋಡ್‌ಗಳನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದ್ದು, ಕೇವಲ 30 ನಿಮಿಷಗಳಲ್ಲಿ 25 ಕಿ.ಮೀ. ಕ್ರಮಿಸುತ್ತದೆ. ಈ ಡ್ರೋನ್ ಹಾರಾಟದ ಸಮಯ 25 ರಿಂದ 33 ನಿಮಿಷಗಳು. ಕಂಪನಿಯ ಎಂಜಿನಿಯರ್‌ಗಳು ನಾಲ್ಕು ವರ್ಷಗಳ ಕಠಿಣ ಪರಿಶ್ರಮದ ನಂತರ ಈ ಡ್ರೋನ್ ಅನ್ನು ರಚಿಸಿದ್ದಾರೆ. ಈ ಡ್ರೋನ್ ಅನ್ನು ಭಾರತೀಯ ಸೇನೆಗೆ ಸಹಾಯಕವಾಗುವಂತೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ಇದನ್ನೂ ಓದಿ: ಕೋವಿಡ್‌ ಬಳಿಕ ಕೈಕೊಟ್ಟ ಸಿಬ್ಬಂದಿ: ಕಿವುಡ, ಮೂಗರಿಗೆ ಕೆಲಸ ಕೊಟ್ಟು ಗಮನ ಸೆಳೆದ ಕೆಫೆ ಮಾಲೀಕ!

ABOUT THE AUTHOR

...view details