ಪುಣೆ(ಮಹಾರಾಷ್ಟ್ರ):ಕೋವಿಡ್ ತಡೆಯಲು ಅನೇಕ ಆವಿಷ್ಕಾರಗಳು ನಡೆಯುತ್ತಿವೆ. ತರಹೇವಾರಿ ಲಸಿಕೆಗಳು ಮಾರುಕಟ್ಟೆಗೆ ಬಂದಿರುವಂತೆ, ವಿವಿಧ ರೀತಿಯ ಮಾಸ್ಕ್ಗಳೂ ಕೂಡಾ ಮಾರುಕಟ್ಟೆಗೆ ಲಗ್ಗೆಯಿಡಲು ಸಿದ್ಧವಾಗಿವೆ. ಈಗ ಸಂಪರ್ಕಕ್ಕೆ ಬಂದ ಕೋವಿಡ್ ವೈರಸ್ ಕೆಲವೇ ಕ್ಷಣಗಳಲ್ಲಿ ನಿಷ್ಕ್ರಿಯಗೊಳಿಸುವ ಮಾಸ್ಕ್ ಆವಿಷ್ಕಾರಗೊಂಡಿದೆ.
ಪುಣೆ ಮೂಲದ ಸ್ಟಾರ್ಟ್ಅಪ್ ಕಂಪನಿಯೊಂದು 3ಡಿ (ಮೂರು ಆಯಾಮ) ಮಾಸ್ಕ್ ಸಂಶೋಧನೆ ಮಾಡಿದ್ದು, ಕೊರೊನಾ ವೈರಸ್ ಹರಡದಂತೆ ತಡೆಯಲು ಇದು ಬಹುಪಾಲು ಯಶಸ್ವಿಯಾಗುತ್ತದೆ ಎಂದು ಕಂಪನಿ ಹೇಳಿದೆ.
ಥಿನ್ಸಿಆರ್ ಟೆಕ್ನಾಲಜೀಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿ ಈ ಮಾಸ್ಕ್ ಆವಿಷ್ಕರಿಸಿದೆ. ಮಾಸ್ಕ್ ಇದರ ಮೇಲಿನ 3ಡಿ ಪ್ರಿಂಟಿಂಗ್ ಮತ್ತು ಈ ಮಾಸ್ಕ್ಗೆ ಬಳಸಿರುವ ಔಷಧೀಯ ಗುಣಗಳು ವೈರಸ್ ಸಂಪರ್ಕಕ್ಕೆ ಬಂದ ತಕ್ಷಣ ಕೊಲ್ಲಲ್ಪಡುತ್ತವೆ. ಇದಕ್ಕಾಗಿ ಮಾಸ್ಕ್ನಲ್ಲಿ ವೈರಸೈಡ್ಸ್ ಎಂಬ ಆ್ಯಂಟಿವೈರಲ್ ಸಂಯುಕ್ತವನ್ನು ಬಳಸಲಾಗುತ್ತದೆ.
ಮಾಸ್ಕ್ ಆವಿಷ್ಕಾರಕ್ಕೆ ಸರ್ಕಾರಿ ಅನುದಾನ
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗವಾದ ಟೆಕ್ನಾಲಜಿ ಡೆವಲೆಪ್ಮೆಂಟ್ ಬೋರ್ಡ್ ಅನುದಾನ ನೀಡುವ ವೈರಸಿಡಲ್ ಮಾಸ್ಕ್ ಪ್ರಾಜೆಕ್ಟ್ (Virucidal Mask project) ಅಡಿಯಲ್ಲಿ ಮಾಸ್ಕ್ ತಯಾರು ಮಾಡಲಾಗಿದೆ. ಮೇ 2020ರಂದು ಈ ಯೋಜನೆಗೆ ಅನುದಾನ ನೀಡಲಾಗಿತ್ತು. ಈ ಯೋಜನೆಯ ಅಡಿಯಲ್ಲಿ 2020ರ ಜೂನ್ 8ರಂದು ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು.
ಇದನ್ನೂ ಓದಿ:ಗಂಗೆಯಲ್ಲಿ ತೇಲಿ ಬಂದ ಪೆಟ್ಟಿಗೆ.. ತೆರೆದು ನೋಡಿದಾಗ ಕಾದಿತ್ತು ಅಚ್ಚರಿ!
ಥಿನ್ಸಿಆರ್ ಟೆಕ್ನಾಲಜೀಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ 2016ರಲ್ಲಿ ಹುಟ್ಟುಹಾಕಲ್ಪಟ್ಟ ಸಂಸ್ಥೆಯಾಗಿದ್ದು, ಈಗಾಗಲೇ ಫ್ಯೂಸ್ಡ್ ಡೆಪೋಸಿಷನ್ ಮಾಡೆಲಿಂಗ್ 3ಡಿ ಪ್ರಿಂಟರ್ಗಳನ್ನು ಈ ಕಂಪನಿ ಉತ್ಪಾದಿಸುತ್ತದೆ.
"ಝಾಂಬಾದ್, ಕೋವಿಡ್ ತಡೆಯುವಲ್ಲಿ ಮಾಸ್ಕ್ ಅತ್ಯಂತ ಮುಖ್ಯವಾದ ಸಾಧನ. ಈಗಾಗಲೇ ನಾವು ಹಲವು ರೀತಿಯ ಮಾಸ್ಕ್ಗಳನ್ನು ಕಂಡುಹಿಡಿದಿದ್ದೇವೆ. ಆದರೆ ಕೋವಿಡ್ ತಡೆಯಲು ಪ್ರಬಲ ಮಾಸ್ಕ್ ಕೂಡಾ ಅವಶ್ಯಕತೆ ಇರುವ ಕಾರಣದಿಂದ 3ಡಿ ಮಾಸ್ಕ್ ಅನ್ನು ಅಭಿವೃದ್ಧಿಪಡಿಸಿದ್ದೇವೆ."
- ಡಾ. ಶೀತಲ್ ಕುಮಾರ್, ಸಂಸ್ಥಾಪಕ ನಿರ್ದೇಶಕ, ಥಿನ್ಸಿಆರ್ ಟೆಕ್ನಾಲಜೀಸ್ ಇಂಡಿಯಾ