ಪುಣೆ(ಮಹಾರಾಷ್ಟ್ರ):ಸಂಬಂಧಕ್ಕೆ ಕಳಂಕ ತರುವಂತಹ ಆಘಾತಕಾರಿ ಘಟನೆವೊಂದು ಮಹಾರಾಷ್ಟ್ರದಲ್ಲಿ ನಡೆದಿದೆ. ಪುಣೆಯ ಗುರುವರ್ ಪೇಠ್ ನಿವಾಸಿಯಾಗಿರುವ 70 ವರ್ಷದ ವೃದ್ಧೆ ಅನುಸಯಾ ಸೋದರಳಿಯನ ಅಕ್ರಮ ಸಾಲದ ಮೋಸಕ್ಕೊಳಗಾಗಿ ಇದೀಗ ದೇವಸ್ಥಾನ ಮುಂದೆ ಭಿಕ್ಷೆ ಬೇಡುತ್ತಿದ್ದಾಳೆ.
70 ವರ್ಷದ ಅನುಸಯಾ ಪಟೋಲೆ ಮೊಮ್ಮಗನ ಚಿಕಿತ್ಸೆಗಾಗಿ ಕಳೆದ ಐದು ವರ್ಷಗಳ ಹಿಂದೆ ಸೋದರಳಿಯ ದಿಲೀಪ್ ವಿಜಯ್ ಬಳಿ ಶೇ. 10ರ ಬಡ್ಡಿ ದರದಲ್ಲಿ 40 ಸಾವಿರ ರೂ. ಸಾಲ ಪಡೆದುಕೊಂಡಿದ್ದಳು. ಕೆಲ ದಿನಗಳ ಬಳಿಕ ತಾನು ಪಡೆದ ಸಾಲಕ್ಕೆ ಬಡ್ಡಿ ಸಮೇತವಾಗಿ ಅಸಲು ನೀಡಿದ್ದಾಳೆ. ಆದರೆ, ವೃದ್ಧೆಯ ಅನಕ್ಷರತೆಯ ಲಾಭ ಪಡೆದುಕೊಂಡಿರುವ ಆತ ಹೆಚ್ಚಿನ ಬಡ್ಡಿ ಹಣ ನೀಡಬೇಕೆಂದು ವೃದ್ಧೆಯ ಎರಡು ಎಟಿಎಂ ಕಾರ್ಡ್, ಪಾಸ್ ಬುಕ್ ತೆಗೆದುಕೊಂಡಿದ್ದಾನೆ. ಜೊತೆಗೆ ಎಟಿಎಂನಲ್ಲಿನ 16,344 ರೂ. ಡ್ರಾ ಮಾಡಿಕೊಂಡಿದ್ದಾನೆ.
ಲಕ್ಷಾಂತರ ರೂ. ನೀಡಿದ್ರೂ, ಭಿಕ್ಷೆ ಬೇಡಿ ಸಾಲ ಕಟ್ಟುತ್ತಿರುವ ವೃದ್ಧೆ ಇದನ್ನೂ ಓದಿರಿ:"ಈ ಹಳ್ಳಿ ಎಲ್ಲ ಗ್ರಾಮಗಳಂತಲ್ಲ" ಒಂದು ಕಡೆ ಪಾಕಿಸ್ತಾನ, ಮೂರ ಕಡೆ ನದಿ: ನಗರಕ್ಕೆ ಬರಲು ದೋಣಿಯೊಂದೇ ದಾರಿ!
ಪ್ರತಿ ತಿಂಗಳು ಆಕೆಯಿಂದ 2 ಸಾವಿರ ರೂ. ಕಟ್ಟಿಸಿಕೊಳ್ಳುತ್ತಿರುವ ದಿಲೀಪ್, ಇಲ್ಲಿಯವರೆಗೆ 8 ಲಕ್ಷ ರೂ. ತೆಗೆದುಕೊಂಡಿದ್ದಾನೆಂಬ ಆರೋಪ ಕೇಳಿ ಬಂದಿದೆ. ಇದರ ಮಧ್ಯೆ ಅನುಸಯಾ ಸರಸ್ಬಾಗ್ ಗಣಪತಿ ದೇವಸ್ಥಾನದ ಮುಂದೆ ಭಿಕ್ಷೆ ಬೇಡುತ್ತಾ, ಜೀವನ ನಡೆಸುತ್ತಿದ್ದಾಳೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೀಗೆ!
ದೇವಸ್ಥಾನದ ಮುಂಭಾಗದಲ್ಲಿ ಭಿಕ್ಷೆ ಬೀಡುತ್ತಿದ್ದ ಅನುಸಯಾಳನ್ನ ವ್ಯಕ್ತಿಯೋರ್ವ ಮಾತನಾಡಿಸಿದ್ದಾನೆ. ಈ ವೇಳೆ ನಡೆದ ಘಟನೆ ಬಗ್ಗೆ ಆಕೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ಇದರ ಬೆನ್ನಲ್ಲೇ ಮಿತ್ಗಂಜ್ ಪೊಲೀಸ್ ಠಾಣೆಗೆ ಕರೆದೊಯ್ದು ಪ್ರಕರಣ ದಾಖಲು ಮಾಡಿದ್ದಾರೆ. ಈಗಾಗಲೇ ಆರೋಪಿಯನ್ನ ಬಂಧನ ಮಾಡಲಾಗಿದ್ದು, ಆತ ವಶಕ್ಕೆ ಪಡೆದುಕೊಂಡಿದ್ದ ಎಟಿಎಂ ಹಾಗೂ ಪಾಸ್ಬುಕ್ ವೃದ್ಧೆಗೆ ನೀಡಿದ್ದಾರೆ.
ಪುಣೆ ಮಹಾನಗರ ಪಾಲಿಕೆಯಲ್ಲಿ ಕೆಲಸ ಮಾಡುತ್ತಿರುವ ಆರೋಪಿ, ಸಾಲ ನೀಡುವ ಪರವಾನಿಗೆ ಇಲ್ಲದಿದ್ದರೂ, ಬಡವರಿಗೆ ಶೇ. 10ರ ಬಡ್ಡಿದರದಲ್ಲಿ ಸಾಲ ನೀಡುತ್ತಿದ್ದಾನೆಂದು ತಿಳಿದು ಬಂದಿದೆ.