ಕರ್ನಾಟಕ

karnataka

ETV Bharat / bharat

ಪುಲಿಟ್ಜರ್​ ಪ್ರಶಸ್ತಿಗಾಗಿ ನ್ಯೂಯಾರ್ಕ್​ಗೆ ಹೊರಟಿದ್ದ ಫೋಟೋ ಜರ್ನಲಿಸ್ಟ್​ಗೆ ದೆಹಲಿಯಲ್ಲಿ ತಡೆ - ಸನಾ ಇರ್ಷಾದ್ ಮಟ್ಟೂ

ಪುಲಿಟ್ಜರ್​ ಪ್ರಶಸ್ತಿ ಸ್ವೀಕರಿಸಲು ನ್ಯೂಯಾರ್ಕ್​ಗೆ ತೆರಳುತ್ತಿದ್ದ ಕಾಶ್ಮೀರಿ ಫೋಟೋ ಜರ್ನ​ಲಿಸ್ಟ್​ವೊಬ್ಬರನ್ನು ದೆಹಲಿ ಪೊಲೀಸರು ವಿಮಾನ ನಿಲ್ದಾಣದಲ್ಲಿ ತಡೆದು ವಾಪಸ್​ ಕಳುಹಿಸಿದ್ದಾರೆ. ಇದರಿಂದ ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸುವ ಕಾರ್ಯಕ್ರಮದಿಂದ ಜರ್ನಲಿಸ್ಟ್​ ವಂಚಿತರಾದರು.

sana-irshad-mattoo-was-stopped-at-delhi-airport
ಪುಲಿಟ್ಜರ್​ ಪ್ರಶಸ್ತಿಗಾಗಿ ನ್ಯೂಯಾರ್ಕ್​ಗೆ ಹೊರಟಿದ್ದ ಫೋಟೋ ಜರ್ನಲಿಸ್ಟ್​ಗೆ ತಡೆ

By

Published : Oct 19, 2022, 9:49 AM IST

ನವದೆಹಲಿ:ನಿಷೇಧದ ಮಧ್ಯೆಯೂ ಪುಲಿಟ್ಜರ್ ಪ್ರಶಸ್ತಿ ಸ್ವೀಕರಿಸಲು ವಿದೇಶಕ್ಕೆ ತೆರಳುತ್ತಿದ್ದ ಕಾಶ್ಮೀರಿ ಫೋಟೋ ಜರ್ನಲಿಸ್ಟ್ ಸನಾ ಇರ್ಷಾದ್ ಮಟ್ಟೂ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ತಡೆಯಲಾಗಿದೆ. ಅವರನ್ನು ತಡೆಯುತ್ತಿರುವ ಎರಡನೇ ಘಟನೆ ಇದಾಗಿದೆ. ಈ ಮೊದಲು ಪ್ಯಾರೀಸ್​ಗೆ ಹೋಗುವಾಗ ನಿಲ್ದಾಣದಲ್ಲೇ ತಡೆದು ಪ್ರಯಾಣ ನಿರಾಕರಿಸಲಾಗಿತ್ತು.

ಕಾಶ್ಮೀರಿ ಫೋಟೋ ಜರ್ನಲಿಸ್ಟ್​ ಆದ ಸನಾ ಇರ್ಷಾದ್​ ಮಟ್ಟೂ ಅವರು ಕೊರೊನಾ ಸಾಂಕ್ರಾಮಿಕದ ವೇಳೆ ಮಾರಕ ಕತೆ ಹೇಳುವ ಫೋಟೋಗಳನ್ನು ಸೆರೆಹಿಡಿದು ಖ್ಯಾತಿಯಾಗಿದ್ದರು. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸನಾ ಇರ್ಷಾದ್​ ಮೇಲೆ ವಿದೇಶ ಪ್ರಯಾಣದ ನಿರ್ಬಂಧ ಹೇರಲಾಗಿದೆ.

2018 ರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ವತಂತ್ರ ಫೋಟೋ ಜರ್ನಲಿಸ್ಟ್ ಆಗಿ ಕೆಲಸ ಮಾಡುತ್ತಿರುವ ಸನಾ ಇರ್ಷಾದ್ ಮಟ್ಟೂ ಕೊರೊನಾ ಸಾಂಕ್ರಾಮಿಕ ವೇಳೆ ತೆಗೆದ ಚಿತ್ರಗಳು ವಿಶ್ವ ಮಟ್ಟದಲ್ಲಿ ಸದ್ದು ಮಾಡಿದ್ದವು. ಇದಕ್ಕಾಗಿ ಅವರು ಫೀಚರ್ ಫೋಟೋಗ್ರಫಿ ವಿಭಾಗದಲ್ಲಿ 2022 ರ ಸಾಲಿನ ಪುಲಿಟ್ಜರ್ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಇದು ಪತ್ರಿಕೋದ್ಯಮ ಜಗತ್ತಿನ ಅತಿ ದೊಡ್ಡ ಪ್ರಶಸ್ತಿ ಎಂದೇ ಪರಿಗಣಿಸಲಾಗಿದೆ.

"ಪ್ರಶಸ್ತಿ ಪಡೆಯಲು ನ್ಯೂಯಾರ್ಕ್​ಗೆ ತೆರಳುತ್ತಿದ್ದಾಗ ದೆಹಲಿ ಪೊಲೀಸರು ವಿಮಾನ ನಿಲ್ದಾಣದಲ್ಲೇ ತಡೆದರು. ಇದರಿಂದ ನಾನು ಪ್ರಶಸ್ತಿಯನ್ನು ಪಡೆಯುವುದರಿಂದ ವಂಚಿತನಾಗಿದ್ದೇನೆ. ಇದು ಎರಡನೇ ಸಲವಾಗಿದೆ. ಜೀವನದಲ್ಲಿ ಒಮ್ಮೆ ಮಾತ್ರ ಇಂತಹ ಪ್ರಶಸ್ತಿಯನ್ನು ಪಡೆಯಲು ಸಾಧ್ಯ. ಆ ಆಸೆಯನ್ನು ಅಧಿಕಾರಿಗಳು ಮಣ್ಣುಪಾಲು ಮಾಡಿದರು" ಎಂದು ಸನಾ ಇರ್ಷಾದ್​​ ಕಿಡಿಕಾರಿದ್ದಾರೆ.

ಈ ಹಿಂದೆ ಜುಲೈನಲ್ಲಿ ಪುಸ್ತಕ ಬಿಡುಗಡೆ ಮತ್ತು ಛಾಯಾಗ್ರಹಣ ಪ್ರದರ್ಶನಕ್ಕಾಗಿ ಪ್ಯಾರಿಸ್‌ಗೆ ಹೋಗುತ್ತಿದ್ದಾಗ ಇದೇ ದೆಹಲಿ ವಿಮಾನ ನಿಲ್ದಾಣದಲ್ಲಿಯೇ ಸನಾರನ್ನು ತಡೆಯಲಾಯಿತು. ನಿರ್ಬಂಧಗಳಿರುವ ಕಾರಣ ವಿದೇಶಕ್ಕೆ ಪ್ರಯಾಣಿಸಲು ಅನುಮತಿ ನೀಡಲಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು.

ಫೀಚರ್ ಛಾಯಾಗ್ರಹಣ ವಿಭಾಗದಲ್ಲಿ ಪುಲಿಟ್ಜರ್ ಪ್ರಶಸ್ತಿಗೆ ಘೋಷಿಸಲ್ಪಟ್ಟಿರುವ ನಾಲ್ವರು ಪತ್ರಕರ್ತರಲ್ಲಿ ಸನಾ ಇರ್ಷಾದ್ ಮಟ್ಟೂ ಇದ್ದರು. ಇವರಲ್ಲದೇ, ಅದ್ನಾನ್ ಅಬಿದಿ, ದಿವಂಗತ ಡ್ಯಾನಿಶ್ ಸಿದ್ದಿಕಿ ಮತ್ತು ಅಮಿತ್ ದವೆ ಅವರ ಹೆಸರು ಪ್ರಶಸ್ತಿ ಪಟ್ಟಿಯಲ್ಲಿದೆ.

ಓದಿ:ಅಮೆರಿಕ TO ಭಾರತ.. ಪ್ರೀತಿಗಾಗಿ ಸಪ್ತಸಾಗರ ದಾಟಿ ಬಂದ ಯುವತಿ

ABOUT THE AUTHOR

...view details