ಕರ್ನಾಟಕ

karnataka

ETV Bharat / bharat

2 ಕೋಟಿ ನಗದು, 30 ಸಾವಿರ ಸೆಟ್​​ ಟಾಪ್ ಬಾಕ್ಸ್​​ ವಶಕ್ಕೆ ಪಡೆದ ಚುನಾವಣಾಧಿಕಾರಿಗಳು! - 2 ಕೋಟಿ ರೂ.ಸೀಜ್​

ಪುದುಚೇರಿಯಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿರುವ ಚುನಾವಣಾಧಿಕಾರಿಗಳು ಅಪಾರ ಪ್ರಮಾಣದ ನಗದು ಹಾಗೂ ಸೆಟ್​​-ಟಾಪ್​ ಬಾಕ್ಸ್​ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Puducherry Election
Puducherry Election

By

Published : Mar 19, 2021, 3:27 PM IST

ಪುದುಚೇರಿ:ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸೋಂ ಜತೆಗೆ ಪುದುಚೇರಿ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ಏಪ್ರಿಲ್​ 6ರಂದು ಒಂದೇ ಹಂತದಲ್ಲಿ ಮತದಾನವಾಗಲಿದೆ.

ಚುನಾವಣೆ ಘೋಷಣೆಯಾಗುತ್ತಿದ್ದಂತೆ ಅಪಾರ ಪ್ರಮಾಣದಲ್ಲಿ ನಗದು ಹರಿದಾಡುತ್ತಿದೆ. ಪುದುಚೇರಿಯಲ್ಲಿ ಚುನಾವಣಾಧಿಕಾರಿಗಳು 2 ಕೋಟಿ ರೂ. ಹಣ ವಶಕ್ಕೆ ಪಡೆದುಕೊಂಡಿದ್ದಾರೆ. ಇದರ ಜತೆಗೆ 30 ಸಾವಿರ ಸೆಟ್​​ ಟಾಪ್ ಬಾಕ್ಸ್​​ ಕೂಡ ಜಪ್ತಿ​ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

500,200 ಹಾಗೂ 100 ರೂ. ನೋಟುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ರಾತ್ರಿ ವೇಳೆ ವಾಹನದಲ್ಲಿ ರವಾನೆ ಮಾಡುತ್ತಿದ್ದ ವೇಳೆ ಪರಿಶೀಲನೆ ನಡೆಸಿದಾಗ ಹಣ ಇರುವುದು ಪತ್ತೆಯಾಗಿದೆ ಎಂದು ಚುನಾವಣಾಧಿಕಾರಿ ಸುಭೀರ್​ ಸಿಂಗ್​ ತಿಳಿಸಿದ್ದಾರೆ. ಇದರ ಜತೆಗೆ 30 ಸಾವಿರ ಸೆಟ್​​ ಟಾಪ್ ಬಾಕ್ಸ್​ ಕೂಡ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಅಸ್ಸೋಂ ಚುನಾವಣೆ: 53 ಲಕ್ಷ ನಗದು, 3.93 ಕೋಟಿ ರೂ. ಮೌಲ್ಯದ ಮದ್ಯ ವಶ

ಉಳಿದಂತೆ 3,600 ಲೀಟರ್​ ಮದ್ಯ ಕೂಡ ವಶಕ್ಕೆ ಪಡೆದುಕೊಳ್ಳುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆಂದು ಅವರು ತಿಳಿಸಿದ್ದಾರೆ.

ABOUT THE AUTHOR

...view details