ಕರ್ನಾಟಕ

karnataka

ಸರ್ಕಾರದ ಆಡಳಿತದಲ್ಲಿ ಗವರ್ನರ್​ ಹಸ್ತಕ್ಷೇಪ ಆರೋಪ: ಪ್ರತಿಭಟನೆ ಮುಂದುವರೆಸಿದ ಪುದುಚೆರಿ ಸಿಎಂ

ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಪುದುಚೆರಿ ಸರ್ಕಾರದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ವರನ್ನು ವಾಪಸ್​ ಕರೆಸಿಕೊಳ್ಳಬೇಕು ಎಂದು ಒತ್ತಾಯಿಸಿ ಸಿಎಂ ವಿ.ನಾರಾಯಣಸ್ವಾಮಿ ಪ್ರತಿಭಟನೆ ನಡೆಸುತ್ತಿದ್ದಾರೆ.

By

Published : Jan 10, 2021, 6:16 PM IST

Published : Jan 10, 2021, 6:16 PM IST

Puducherry CM's protest
ಪ್ರತಿಭಟನೆ ಮುಂದುವರೆಸಿದ ಪುದುಚೆರಿ ಸಿಎಂ

ಪುದುಚೆರಿ: ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ರಾಜ್ಯ ಸರ್ಕಾರದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಅವರನ್ನು ವಾಪಸ್​ ಕರೆಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಅವರು ರಾಜ್ ನಿವಾಸ್ ಬಳಿ ಪ್ರತಿಭಟನೆ ಮುಂದುವರಿಸಿದ್ದಾರೆ.

ಇದನ್ನು ಓದಿ: ಸಚಿವಾಕಾಂಕ್ಷಿಗಳಿಗೆ ಸಂತಸದ ಸುದ್ದಿ: ಶೀಘ್ರವೇ ಹೆಸರು ಬಹಿರಂಗ ಎಂದ ಸಿಎಂ ಬಿಎಸ್​ವೈ

"ಕಿರಣ್​ ಬೇಡಿಯವರು ಚುನಾಯಿತ ಸರ್ಕಾರವನ್ನು ಕಾರ್ಯನಿರ್ವಹಿಸಲು ಬಿಡುತ್ತಿಲ್ಲ. ದಿನನಿತ್ಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ" ಎಂದು ನಾರಾಯಣ ಸ್ವಾಮಿ ಆರೋಪಿಸಿದ್ದಾರೆ. ಮುಖ್ಯಮಂತ್ರಿ, ಕ್ಯಾಬಿನೆಟ್ ಸಹೋದ್ಯೋಗಿಗಳು, ಆಡಳಿತ ಪಕ್ಷದ ಶಾಸಕರು ಮತ್ತು ಮೈತ್ರಿ ಪಕ್ಷಗಳ ಕಾರ್ಯಕರ್ತರು ಧರಣಿಯಲ್ಲಿ ಭಾಗವಹಿಸಿದ್ದಾರೆ.

ಕೆಲವು ಪ್ರತಿಭಟನಾಕಾರರು "ಬೇಡಿ ಯು ಗೋ! ಯು ಗೋ !!" ಎಂದು ಘೋಷಣೆ ಕೂಗುತ್ತಿದ್ದಾರೆ. ಪುದುಚೇರಿಯಲ್ಲಿ ಕಾಂಗ್ರೆಸ್ ನೇತೃತ್ವದ ಸೆಕ್ಯುಲರ್ ಡೆಮಾಕ್ರಟಿಕ್ ಅಲಯನ್ಸ್ ಪಕ್ಷ ಗವರ್ನರ್​ ಕಿರಣ್ ಬೇಡಿ ವಿರುದ್ಧ ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿದೆ.

ABOUT THE AUTHOR

...view details