ಕರ್ನಾಟಕ

karnataka

ETV Bharat / bharat

ತಮ್ಮ ವಿರುದ್ಧದ ದೂರನ್ನು ತಪ್ಪಾಗಿ ಅನುವಾದಿಸಿದ ಪುದುಚೆರಿ ಸಿಎಂ! - ಪುದುಚೆರಿ ಸಿಎಂರಿಂದ ತಪ್ಪು ಅನುವಾದ ಸುದ್ದಿ

ರಾಹುಲ್​ ಗಾಂಧಿ ಪುದುಚೆರಿಯಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದು, ವೃದ್ಧೆಯೊಬ್ಬರು ಈ ವೇಳೆ ದೂರು ಸಲ್ಲಿಸಿದ್ದಾರೆ. ಆದರೆ ಆ ದೂರನ್ನು ಸಿಎಂ ನಾರಾಯಣಸಾಮಿ ತಪ್ಪಾಗಿ ಅನುವಾದಿಸಿದ ಘಟನೆ ನಡೆದಿದೆ.

Puducherry CM
ಪುದುಚೆರಿ ಸಿಎಂ

By

Published : Feb 18, 2021, 2:35 PM IST

ಪುದುಚೆರಿ: ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಪುದುಚೆರಿ ಆಗಮಿಸಿದ್ದ ಸಂದರ್ಭದಲ್ಲಿ ವೃದ್ಧೆಯೊಬ್ಬರು ದೂರು ಸಲ್ಲಿಸಿದ್ದಾರೆ. ಆದರೆ, ಅದರ ಅನುವಾದ ಮಾಡಿದ ಸಿಎಂ ನಾರಾಯಣಸಾಮಿ ತಪ್ಪಾಗಿ ತಿಳಿಸಿರುವ ಘಟನೆ ನಡೆದಿದೆ.

ಪುದುಚೆರಿಯಲ್ಲಿ ಪ್ರಚಾರ ಮಾಡಿದ ರಾಹುಲ್ ಗಾಂಧಿ ಜನರ ಅಹವಾಲುಗಳನ್ನು ಆಲಿಸಿದರು. ಅಲ್ಲಿರುವ ಮೀನುಗಾರ ಸಮುದಾಯದೊಂದಿಗೆ ಸಮಾವೇಶವನ್ನು ನಡೆಸಿದರು.

ತಪ್ಪಾಗಿ ಅನುವಾದ ಮಾಡಿದ ಸಿಎಂ

ಇನ್ನು ಈ ವೇಳೆ, "ಚಂಡಮಾರುತದ ಸಮಯದಲ್ಲಿ ಪ್ರವಾಹ ಪೀಡಿತ ಸ್ಥಳಗಳಿಗೆ ಮುಖ್ಯಮಂತ್ರಿಗಳು ಭೇಟಿ ನೀಡಲಿಲ್ಲ" ಎಂದು ವೃದ್ಧೆಯೊಬ್ಬರು ಆರೋಪಿಸಿದ್ದಾರೆ. ಆದರೆ, ಮುಖ್ಯಮಂತ್ರಿ ನಾರಾಯಣಸಾಮಿ "ಚಂಡಮಾರುತದ ಸಮಯದಲ್ಲಿ ಸಿಎಂ ಬಂದು ಜನರಿಗೆ ಪರಿಹಾರ ಸಾಮಗ್ರಿಗಳನ್ನು ನೀಡಿದರು ಎಂದು ಹೇಳಿದ್ದಾಗಿ ಅನುವಾದ ಮಾಡಿದ್ದಾರೆ.

ಈ ತಪ್ಪು ಅನುವಾದವು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದಲ್ಲದೇ, ವಿರೋಧ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ABOUT THE AUTHOR

...view details