ಕರ್ನಾಟಕ

karnataka

ETV Bharat / bharat

ಫೆ.14ರಂದು ಶ್ರೀಹರಿಕೋಟಾದಿಂದ ಪಿಎಸ್‌ಎಲ್‌ವಿ ಸಿ-52 ರಾಕೆಟ್ ಉಡಾವಣೆ - PSLV C-52 Rocket launch

ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇದೇ ತಿಂಗಳ 14 ರಂದು ಪಿಎಸ್‌ಎಲ್‌ವಿ ಸಿ-52 ರಾಕೆಟ್ ಉಡಾವಣೆ ಮಾಡಲು ಇಸ್ರೋ ತಯಾರಿ ನಡೆಸುತ್ತಿದೆ.

PSLV C-52 Rocket launch
ಪಿಎಸ್‌ಎಲ್‌ವಿ ಸಿ-52 ರಾಕೆಟ್

By

Published : Feb 12, 2022, 1:36 PM IST

ಶ್ರೀಹರಿಕೋಟಾ (ಆಂಧ್ರಪ್ರದೇಶ):ಹಲವಾರು ದಿನಗಳ ನಂತರ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇದೇ ತಿಂಗಳ 14 ರಂದು ಮತ್ತೊಂದು ರಾಕೆಟ್ ಉಡಾವಣೆ ಮಾಡಲು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ವಿಜ್ಞಾನಿಗಳು ಮುಂದಾಗಿದ್ದಾರೆ.

ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್-C52 (PSLV) ರಾಕೆಟ್ ಅನ್ನು ಫೆಬ್ರವರಿ 14ರ ಬೆಳಗ್ಗೆ 5.59ಕ್ಕೆ ಉಡಾವಣೆ ಮಾಡಲಾಗುವುದು. ಕೋವಿಡ್​ ಸವಾಲುಗಳ ನಡುವೆ ಇಸ್ರೋದಿಂದ ಉಡಾವಣೆಗೊಳ್ಳುತ್ತಿರುವ ಈ ವರ್ಷದ ಮೊದಲ ಉಪಗ್ರಹ ಇದಾಗಲಿದೆ. 1,710 ಕೆಜಿ ರಾಡಾರ್ ಇಮೇಜಿಂಗ್ ಉಪಗ್ರಹವು ಇನ್ನೂ ಎರಡು ಸಣ್ಣ ಬಾಹ್ಯಾಕಾಶ ನೌಕೆಗಳನ್ನು ತನ್ನೊಂದಿಗೆ ಹೊತ್ತೊಯ್ಯಲಿದೆ.

ಇದನ್ನೂ ಓದಿ: ಭಾರತದಲ್ಲಿ ಹೈಡ್ರೋಪೋನಿಕ್ಸ್ ಕೃಷಿ.. ಮತ್ತೊಂದು ಹಸಿರುಕ್ರಾಂತಿಗೆ ಅಡಿಪಾಯವಾಗಲಿದೆಯಾ ಹೊಸ ತಂತ್ರಜ್ಞಾನ?

ಇದರ ಜೊತೆಯಲ್ಲಿ ಭಾರತ ಮತ್ತು ಭೂತಾನ್ ಜಂಟಿಯಾಗಿ ನಿರ್ಮಿಸಿದ INS-2B ಉಪಗ್ರಹ InspireSat-1 ಅನ್ನು ಸಹ ಭಾರತೀಯ ಬಾಹ್ಯಾಕಾಶ ಮತ್ತು ತಂತ್ರಜ್ಞಾನ ಸಂಸ್ಥೆ (IIST) ಉಡಾವಣೆ ಮಾಡಲಿದೆ. ಇಂದು ಬೆಳಗ್ಗೆ ಕೆಲ ವಿಜ್ಞಾನಿಗಳು ತಿರುಪತಿಗೆ ಭೇಟಿ ನೀಡಿ ವೆಂಕಟೇಶ್ವರಸ್ವಾಮಿ ಆಶೀರ್ವಾದ ಪಡೆದರು. ಪ್ರತಿಬಾರಿಯೂ ಶ್ರೀಹರಿಕೋಟಾದಿಂದ ರಾಕೆಟ್ ಉಡಾವಣೆ ಮಾಡುವ ತಿಮ್ಮಪ್ಪನ ಆಶೀರ್ವಾದ ಪಡೆಯುವುದು ವಾಡಿಕೆಯಾಗಿದೆ.

ABOUT THE AUTHOR

...view details