ಕರ್ನಾಟಕ

karnataka

ETV Bharat / bharat

ವರ್ಷದ ಮೊದಲ ರಾಕೆಟ್​ ಉಡ್ಡಯನಕ್ಕೆ ಇನ್ನು 6 ದಿನ ಬಾಕಿ.. ಫೆ.14ರಂದು ನಭಕ್ಕೆ ಚಿಮ್ಮಲಿದೆ ಪಿಎಸ್​ಎಲ್​ವಿ ಸಿ-52 - ವರ್ಷದ ಮೊದಲ ರಾಕೆಟ್​ ಉಡ್ಡಯನ

ಪಿಎಸ್​ಎಲ್​ವಿ ಸಿ-52 ವಾಹಕದ ಉಡಾವಣಾ ಅವಧಿ ಫೆ.13ರ ಬೆಳಗ್ಗೆ 4.29ರಿಂದಲೇ ಆರಂಭಗೊಳ್ಳಲಿದೆ. 25 ಗಂಟೆ 30 ನಿಮಿಷಗಳ ನಿರಂತರ ನಿಗಾ ಬಳಿಕ 14ರಂದು ಬೆಳಗ್ಗೆ 5 ಗಂಟೆ 59 ನಿಮಿಷಕ್ಕೆ ನಭಕ್ಕೆ ಚಿಮ್ಮಲಿದೆ..

pslv
ಪಿಎಸ್​ಎಲ್​ವಿ ಸಿ-52

By

Published : Feb 9, 2022, 5:01 PM IST

ವರ್ಷದ ಮೊದಲ ರಾಕೆಟ್​ ಉಡಾವಣೆಗೆ ದಿನಗಣನೆ ಶುರುವಾಗಿದೆ. ಫೆ.14ರಂದು ಆಂಧ್ರಪ್ರದೇಶದ ಸತೀಶ್​ ಧವನ್​ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್‌ಎಲ್‌ವಿ ಸಿ-52 ರಾಕೆಟ್​ ಉಡ್ಡಯನವಾಗಲಿದೆ.

ಪಿಎಸ್‌ಎಲ್‌ವಿ ಸಿ-52 ರಾಕೆಟ್ ಉಡ್ಡಯನಕ್ಕೆ ಎಲ್ಲಾ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ಹವಾಮಾನ ಅನುಕೂಲಕರವಾಗಿದ್ದರೆ ಫೆ.14ರಂದು ಬೆಳಗ್ಗೆ 5 ಗಂಟೆ 59 ನಿಮಿಷಕ್ಕೆ ರಾಕೆಟ್ ಉಡಾವಣೆಯಾಗಲಿದೆ.

ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ C-52 ಕ್ಯಾರಿಯರ್ ಅನ್ನು ಮೊದಲ ಉಡಾವಣಾ ಕೇಂದ್ರದಿಂದ ಹಾರಿಸಲಾಗುವುದು. ವಾಹಕದ ಮೇಲಿನ 4 ಹಂತದ ಸಂಪರ್ಕವು ಪೂರ್ಣಗೊಂಡಿದ್ದು, ಥರ್ಮಲ್ ಶೀಲ್ಡ್ ಅನ್ನು ವಾಹಕದ ಮೇಲ್ಭಾಗದಲ್ಲಿ ಇಂದು ಸ್ಥಿರಗೊಳಿಸಲಾಗುವುದು.

ಪಿಎಸ್​ಎಲ್​ವಿ ಸಿ-52 ವಾಹಕದ ಉಡಾವಣಾ ಅವಧಿ ಫೆ.13ರ ಬೆಳಗ್ಗೆ 4.29ರಿಂದಲೇ ಆರಂಭಗೊಳ್ಳಲಿದೆ. 25 ಗಂಟೆ 30 ನಿಮಿಷಗಳ ನಿರಂತರ ನಿಗಾ ಬಳಿಕ 14ರಂದು ಬೆಳಗ್ಗೆ 5 ಗಂಟೆ 59 ನಿಮಿಷಕ್ಕೆ ನಭಕ್ಕೆ ಚಿಮ್ಮಲಿದೆ. ಇದರಲ್ಲಿ IR-1A, INS-2-TD ಮತ್ತು ವಿದ್ಯಾರ್ಥಿಗಳು ವಿನ್ಯಾಸಗೊಳಿಸಿದ InspireSat-1 ಉಪಗ್ರಹಗಳು ಬಾಹ್ಯಾಕಾಶಕ್ಕೆ ಹಾರಲಿವೆ.

ಓದಿ:ಅತಿ ದೊಡ್ಡ ಇ-ತ್ಯಾಜ್ಯ ರೋಬೋ: ಏಷ್ಯಾ ಬುಕ್ ಆಫ್ ರೆಕಾರ್ಡ್ಸ್​​ನಲ್ಲಿ ದಾಖಲೆ

ABOUT THE AUTHOR

...view details