ಗದಗ: ಶಿರಹಟ್ಟಿ ಪಟ್ಟಣದಲ್ಲಿ ಬಸವ ಜಯಂತಿಯ ನಿಮಿತ್ತ ಪಿಎಸ್ಐ ನವೀನ್ ಜಕ್ಕಲಿ ಅವರು ಬಸ್ ನಿಲ್ದಾಣದ ಪಕ್ಕದಲ್ಲಿನ ಬುಡಕಟ್ಟು ಕುಟುಂಬಗಳಿಗೆ ಊಟ ನೀಡಿ ಹಸಿವು ನೀಗಿಸುವ ಸಾಮಾಜಿಕ ಕೆಲಸ ಮಾಡಿದ್ದಾರೆ.
ಹಸಿದವರಿಗೆ ಅನ್ನ ನೀಡಿ ವಿಶಿಷ್ಟ ರೀತಿಯಲ್ಲಿ ಬಸವ ಜಯಂತಿ ಆಚರಿಸಿದ ಪಿಎಸ್ಐ - ಬಸವ ಜಯಂತಿ
ಗದಗದ ಪಿಎಸ್ಐ ನವೀನ್ ಜಕ್ಕಲಿ ಅವರು ಬಸವ ಜಯಂತಿ ಹಬ್ಬವನ್ನು ಬುಡಕಟ್ಟು ಕುಟುಂಬಗಳಿಗೆ ಊಟ ನೀಡುವ ಮೂಲಕ ವಿಶೇಷವಾಗಿ ಆಚರಣೆ ಮಾಡಿದ್ದಾರೆ.
psi
ಕೋವಿಡ್ ನಿಯಂತ್ರಣಕ್ಕಾಗಿ ಕಠಿಣ ಕರ್ಫ್ಯೂ ಜಾರಿಯಲ್ಲಿದ್ದು, ಕರ್ತವ್ಯದಲ್ಲೂ ಸಹ ಬಿಡುವು ಮಾಡಿಕೊಂಡು ಇಂತಹ ಮಾನವೀಯತೆಯ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರ ಮೂಲಕ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರರಾಗುತ್ತಿದ್ದಾರೆ.