ಕರ್ನಾಟಕ

karnataka

ETV Bharat / bharat

ಪ್ರತಿಯೊಬ್ಬರು ತಮ್ಮ ಊರು, ಮಣ್ಣಿನ ವಾಸನೆ ನೆನಪಿಟ್ಟುಕೊಳ್ಳಬೇಕು: ಸಿಜೆಐ ರಮಣ​​​ - ಮೀಟ್ ಅಂಡ್ ಗ್ರೀಟ್ ಸಮಾರಂಭ

ಅಮೆರಿಕ ಪ್ರವಾಸದಲ್ಲಿರುವ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರು ಇಂದು ನ್ಯೂಜೆರ್ಸಿಯಲ್ಲಿ ನಡೆದ ಭೇಟಿ ಮತ್ತು ಶುಭಾಶಯ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ವೇಳೆ ತೆಲುಗು ಜನರಲ್ಲಿ ನಾನೂ ಒಬ್ಬನಾಗಿರುವುದಕ್ಕೆ ಹೆಮ್ಮೆಯಾಗುತ್ತಿದೆ ಎಂದರು. ಈ ಮೂಲಕ ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಊರು ಮತ್ತು ಮಣ್ಣಿನ ವಾಸನೆಯನ್ನು ನೆನಪಿಟ್ಟುಕೊಳ್ಳಲು ಸೂಚಿಸಿದರು.

Justice NV Ramana visit to New Jersey, Justice NV Ramana and Sivamala couple, Meet and Greet function, Justice NV Ramana news, ನ್ಯಾಯಮೂರ್ತಿ ಎನ್‌ವಿ ರಮಣ ನ್ಯೂಜೆರ್ಸಿಗೆ ಭೇಟಿ, ನ್ಯಾಯಮೂರ್ತಿ ಎನ್‌ವಿ ರಮಣ ಮತ್ತು ಶಿವಮಾಲಾ ದಂಪತಿ, ಮೀಟ್ ಅಂಡ್ ಗ್ರೀಟ್ ಸಮಾರಂಭ, ನ್ಯಾಯಮೂರ್ತಿ ಎನ್‌ವಿ ರಮಣ ಸುದ್ದಿ,
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ

By

Published : Jun 25, 2022, 12:35 PM IST

Updated : Jun 25, 2022, 12:58 PM IST

ನ್ಯೂಜೆರ್ಸಿ (ಅಮೆರಿಕ): ಅಮೆರಿಕದ ತೆಲುಗು ಸಮುದಾಯವು ನ್ಯೂಜೆರ್ಸಿಯಲ್ಲಿ ಆಯೋಜಿಸಿದ್ದ ‘ಮೀಟ್ ಅಂಡ್ ಗ್ರೀಟ್’ ಕಾರ್ಯಕ್ರಮದಲ್ಲಿ ಸಿಜೆಐ ನ್ಯಾಯಮೂರ್ತಿ ಎನ್‌ವಿ ರಮಣ ಮತ್ತು ಶಿವಮಾಲಾ ದಂಪತಿ ಭಾಗವಹಿಸಿದ್ದರು. ನಮ್ಮ ತೆಲುಗು ತಾಯಿಗೆ ಮಲ್ಲಿಗೆಯ ಹೂವಿನ ಹಾರದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ತೆಲುಗು ಜನರಲ್ಲಿ ಒಬ್ಬನಾಗಿರುವುದಕ್ಕೆ ಹೆಮ್ಮೆಯಾಗುತ್ತಿದೆ. ತೆಲುಗು ತಾಯಿಯ ಮುದ್ದು ಮಕ್ಕಳನ್ನು ಭೇಟಿ ಮಾಡುತ್ತಿರುವುದಕ್ಕೆ ಸಂತಸವಾಗಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಹೇಳಿದರು.

ಅಮೆರಿಕದಲ್ಲಿ ಸುಮಾರು 7 ಲಕ್ಷ ತೆಲುಗರಿದ್ದಾರೆ. ಕೆಲವು ಹಂತಗಳಲ್ಲಿ ಹಲವು ಪರೀಕ್ಷೆಗಳನ್ನು ಎದುರಿಸಿ ಮುನ್ನಡೆಯುತ್ತಿದ್ದಾರೆ. ಮಾತೃಭೂಮಿ ಮತ್ತು ಸ್ವಂತ ಜನರನ್ನು ತೊರೆದು ಇಲ್ಲೇ ನೆಲೆಸಿದ್ದಾರೆ. ಸಂಸ್ಕಾರದಿಂದ ಜೀವನ ನಡೆಸುತ್ತಿದ್ದಾರೆ. ನಿಮ್ಮ ಬದ್ಧತೆಯನ್ನು ನೋಡಿದರೆ ತೆಲುಗು ರಾಷ್ಟ್ರದ ಭವಿಷ್ಯ ಸುಭದ್ರವಾಗಿದೆ ಎಂದು ನಂಬಿದ್ದೇನೆ. ತಮ್ಮ ಊರು ಮತ್ತು ಮಣ್ಣಿನ ವಾಸನೆಯನ್ನು ನೆನಪಿಟ್ಟುಕೊಳ್ಳಬೇಕು ಎಂದು ನ್ಯಾಯಮೂರ್ತಿ ಎನ್.ವಿ.ರಮಣ ಹೇಳಿದರು.

ತೆಲುಗಿನಲ್ಲಿ ಮಾತನಾಡಿದ ನ್ಯಾಯಮೂರ್ತಿ: ತೆಲುಗು ಕೇವಲ ಭಾಷೆಯಲ್ಲ. ಅದೊಂದು ಜೀವನ ವಿಧಾನ ಮತ್ತು ನಾಗರಿಕತೆ. ನಾವು ನಮ್ಮ ಭಾಷೆಯ ಜೊತೆಗೆ ಅನ್ಯ ಭಾಷೆಯನ್ನೂ ಗೌರವಿಸುತ್ತೇವೆ. ತಾಯ್ನಾಡು ಭಾಷೆಯ ಮಾಧುರ್ಯವನ್ನು ಅನುಭವಿಸಬೇಕು. ಮನೆಯಲ್ಲಿ ಮಾತನಾಡುವಾಗ ಮಾತೃಭಾಷೆಯಲ್ಲಿಯೇ ಮಾತನಾಡಬೇಕು. ನಮ್ಮ ಭಾಷೆ, ಸಂಸ್ಕೃತಿಯನ್ನು ಮರೆತರೆ ಅಳಿವಿನಂಚಿನತ್ತ ಸಾಗುವ ಅಪಾಯವಿದೆ. ತೆಲುಗು ಭಾಷಾ ಚಳವಳಿಯ ದುಃಸ್ಥಿತಿಯಿಂದ ಬೇಸರವಾಗಿದೆ. ಮಾತೃಭಾಷೆಯಲ್ಲಿ ಉದ್ಯೋಗಗಳು ಬರುತ್ತವೆ ಎಂಬುದು ಮಿಥ್ಯೆ. ಮಾತೃಭಾಷೆಯಲ್ಲಿಯೇ ಓದಿ ಈ ಮಟ್ಟಕ್ಕೆ ಬಂದಿರುವುದನ್ನು ಮರೆಯಬಾರದು ಎಂದು ನ್ಯಾಯಮೂರ್ತಿ ಎನ್.ವಿ.ರಮಣ ಹೇಳಿದರು.

ಓದಿ:Watch... ಎತ್ತಿನಗಾಡಿನಲ್ಲಿ ಸಿಜೆಐ ಎನ್​ವಿ ರಮಣ: ಹುಟ್ಟೂರಿನಲ್ಲಿ ಅದ್ಧೂರಿ ಸ್ವಾಗತ

'ಜೋಶುವಾ, ದಾಶರಥಿ, ಶ್ರೀ ಶ್ರೀಗಳಂತಹ ಮಹಾಪುರುಷರು ನಮಗೆ ಬೆಲೆಕಟ್ಟಲಾಗದ ಸಂಪತ್ತನ್ನು ನೀಡಿದ್ದಾರೆ. ತೆಲುಗು ಸಂಸ್ಕೃತಿ, ಕಲೆಗಳ ಮೇಲೆ ಪ್ರಭಾವ ಬೀರಿದ ಎನ್​ಟಿಆರ್ ಅವರ ಶತಮಾನೋತ್ಸವ ಆರಂಭವಾಗಿದೆ. ಎನ್​ಟಿಆರ್, ಘಂಟಾಶಾಲ ಉಚ್ಚಾರಣೆ ನಮ್ಮ ಪೀಳಿಗೆಗೆ ಒಗ್ಗಿಕೊಂಡಿದೆ ಎಂದು ಹೇಳಿದ ನ್ಯಾಯಮೂರ್ತಿ ಎನ್‌ವಿ ರಮಣ ಅವರು ಘಂಟಶಾಲ ವೆಂಕಟೇಶ್ವರ್​ ರಾವ್​ ಮತ್ತು ಎನ್‌ಟಿಆರ್​ಗೆ ಶ್ರದ್ಧಾಂಜಲಿ ಅರ್ಪಿಸಿದರು.

ಅವರ ಸಂಖ್ಯೆ ಹೆಚ್ಚಿದೆ: 2010-2017ರ ನಡುವೆ ಅಮೆರಿಕದಲ್ಲಿ ತೆಲುಗು ಮಾತನಾಡುವವರ ಸಂಖ್ಯೆ ಶೇ.85ರಷ್ಟು ಹೆಚ್ಚಾಗಿದೆ. ತಾಯ್ನಾಡಿನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ನ್ಯಾಯಮೂರ್ತಿ ಎನ್.ವಿ.ರಮಣ ಹೇಳಿದರು.

ಅಮೆರಿಕಾಕ್ಕೆ ಬಂದಾಗ ಆರ್ಥಿಕವಾಗಿ ದೊಡ್ಡ ಪ್ರಗತಿ ಸಾಧಿಸಿರಬಹುದು. ಸಮಾಜದಲ್ಲಿನ ಅಸಮಾನತೆ, ಅಶಾಂತಿ ಹೋಗಲಾಡಿಸುವ ಅಗತ್ಯವಿದೆ. ಸಮಾಜದಲ್ಲಿ ಅರಾಜಕತೆ ಇದ್ದರೆ ಎಷ್ಟೇ ಸಂಪಾದಿಸಿದರೂ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ. ಸಮುದಾಯವು ಅನೇಕ ಧರ್ಮಗಳು ಮತ್ತು ಪ್ರದೇಶಗಳ ಸಮುದಾಯವನ್ನು ಒಳಗೊಂಡಿದೆ. ನಾವೆಲ್ಲರೂ ಒಗ್ಗಟ್ಟಾಗಿರಬೇಕು ಮತ್ತು ಎಲ್ಲರನ್ನೂ ಗೌರವಿಸಬೇಕು.

ತಮಿಳು ಸಂಸ್ಕೃತಿಯನ್ನು ಗೌರವಿಸುವಂತೆ ನನ್ನ ಬಳಿ ಕೇಳಿಕೊಂಡರು. ತಮಿಳರು ಭಾಷೆ ಮತ್ತು ಸಂಸ್ಕೃತಿಗಾಗಿ ಒಗ್ಗಟ್ಟಾಗಿ ಹೋರಾಡುತ್ತಾರೆ. ಸಮಾಜದ ಎಲ್ಲ ವರ್ಗದ ಜನರನ್ನು ಸಮಾಜದಲ್ಲಿ ಸಮಾನವಾಗಿ ಕಾಣಬೇಕು ಎಂದು ಸಿಜೆಐ ನ್ಯಾಯಮೂರ್ತಿ ಎನ್‌ವಿ ರಮಣ ಹೇಳಿದರು.

ರೈತ ಕುಟುಂಬದಿಂದ ಬಂದ ಸಿಜೆಐ: ನ್ಯಾಯಮೂರ್ತಿ ಎನ್.ವಿ.ರಮಣ ಅವರು ತೆಲುಗಿನವರಾಗಿ ಸಿಜೆಐ ಆಗುವ ಅವಕಾಶ ಸಿಕ್ಕಿರುವುದಕ್ಕೆ ತುಂಬಾ ಸಂತೋಷವಾಗಿದೆ. ತಾವು ರೈತ ಕುಟುಂಬದಿಂದ ಬಂದವರು. ತಮ್ಮ ಕುಟುಂಬದಲ್ಲಿ ಯಾರೂ ಹೆಚ್ಚು ವಿದ್ಯಾವಂತರಲ್ಲ. ವಕೀಲಿ ವೃತ್ತಿಯಲ್ಲಿ ಉನ್ನತ ಮಟ್ಟಕ್ಕೆ ಬರುವುದು ತುಂಬಾ ಕಷ್ಟ ಎಂದು ಇದೇ ವೇಳೆ ರಮಣ ಅವರು ಅಭಿಪ್ರಾಯಪಟ್ಟರು.

ಓದಿ:ಹೆತ್ತ ತಾಯಿ, ಹೊತ್ತ ಭೂಮಿ ಸ್ವರ್ಗಕ್ಕಿಂತಲು ಮಿಗಿಲು.. ತವರಿನ ಹಿರಿಮೆ ಹೆಚ್ಚಿಸಲು ಸಿಜೆಐ ಎನ್‌.ವಿ ರಮಣ ಕರೆ

ಅಧ್ಯಕ್ಷರು ಅಥವಾ ಸಣ್ಣ ಉದ್ಯೋಗಿಯೊಂದಿಗೆ ನನ್ನ ವರ್ತನೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಐಷಾರಾಮಿ ನನ್ನ ಮೇಲೆ ಪರಿಣಾಮ ಬೀರುವುದಿಲ್ಲ. ಸಾರ್ವಜನಿಕ ಕಲ್ಯಾಣಕ್ಕೆ ಅತ್ಯಂತ ಶೀಘ್ರ ನ್ಯಾಯ ಸಿಗಬೇಕು. ನ್ಯಾಯಾಲಯಗಳಲ್ಲಿ ಸಾಕಷ್ಟು ಪ್ರಕರಣಗಳು ಬಾಕಿ ಇವೆಯೇ ಎಂದು ನನ್ನನ್ನು ಕೇಳಿದರು. ಭಾರತೀಯ ನ್ಯಾಯಾಂಗವು ಕಾನೂನನ್ನು ಪರಿಶೀಲಿಸುವ ಅಧಿಕಾರವನ್ನು ಹೊಂದಿದೆ.

ನ್ಯಾಯಾಧೀಶರು ಅಧಿಕಾರ ವಹಿಸಿಕೊಂಡಾಗ ಯಾರಾದರೂ ನ್ಯಾಯವನ್ನು ಎತ್ತಿಹಿಡಿಯುವಂತೆ ವರ್ತಿಸುತ್ತಾರೆ. ರಾಜಕೀಯ ದೃಷ್ಟಿಕೋನಗಳನ್ನು ಲೆಕ್ಕಿಸದೇ ಕೆಲಸ ಮಾಡಿ. ನ್ಯಾಯಾಂಗದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಯನ್ನು ನಾವು ತ್ವರಿತವಾಗಿ ಪೂರ್ಣಗೊಳಿಸುತ್ತಿದ್ದೇವೆ. ಸುಪ್ರೀಂಕೋರ್ಟ್‌ನಲ್ಲಿಯೂ ನ್ಯಾಯಮೂರ್ತಿಗಳ ಹುದ್ದೆಗಳನ್ನು ಭರ್ತಿ ಮಾಡಿದ್ದು, ಇತಿಹಾಸ ಅಂತಾ ಸಿಜೆಐ ನ್ಯಾಯಮೂರ್ತಿ ಎನ್‌ವಿ ರಮಣ ಹೇಳಿ ತಮ್ಮ ಮಾತುಗಳನ್ನು ಮುಗಿಸಿದರು.

ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಎನ್.ವಿ.ರಮಣ ಮತ್ತು ಶಿವಮಾಲಾ ದಂಪತಿಯನ್ನು ಸನ್ಮಾನಿಸಲಾಯಿತು. ಭಾರತ್ ಬಯೋಟೆಕ್ ಇಂಡಿಯಾದ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಕೃಷ್ಣ ಎಲ್ಲಾ, ಭಾರತ್ ಬಯೋಟೆಕ್ ಎಂಡಿ ಸುಚಿತ್ರಾ ಎಲಾ ಮತ್ತು ಭಾರತೀಯ ಕಾನ್ಸುಲೇಟ್ ಜನರಲ್ ರಣಧೀರ್ ಜೈಶ್ವಾಲ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Last Updated : Jun 25, 2022, 12:58 PM IST

ABOUT THE AUTHOR

...view details