ಹೈದರಾಬಾದ್: ವಿಶಾಖಪಟ್ಟಣಂ ಸ್ಟೀಲ್ ಪ್ಲಾಂಟ್ ಅನ್ನು ಖಾಸಗೀಕರಣಗೊಳಿಸುವ ಮೋದಿ ಸರ್ಕಾರದ ನೀತಿಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆ ಆಂಧ್ರಪ್ರದೇಶದಲ್ಲಿ ಪ್ರತಿಭಟನೆಗಳು ತೀವ್ರಗೊಂಡಿವೆ.
ವೈಜಾಗ್ ಸ್ಟೀಲ್ ಪ್ಲಾಂಟ್‌ನ ಖಾಸಗೀಕರಣ ವಿರೋಧಿಸಿ 'ರಾಸ್ತಾ ರೊಕೊ'ಗೆ ಕರೆ - Hyderabad
ವಿಶಾಖಪಟ್ಟಣಂ ಉಕ್ಕಿನ ಸಂರಕ್ಷಣಾ ಹೋರಾಟ ಸಮಿತಿ (ವಿಎಸ್‌ಸಿಎಸ್‌ಸಿ) ಈಗ ಶುಕ್ರವಾರ ರಾಜ್ಯಾದ್ಯಂತ 'ರಾಸ್ತಾ ರೊಕೊ'ಗೆ ಕರೆ ನೀಡಿದೆ.

ವೈಜಾಕ್ ಸ್ಟೀಲ್ ಪ್ಲಾಂಟ್‌ನ ಖಾಸಗೀಕರಣ ವಿರೋಧಿಸಿ 'ರಾಸ್ತಾ ರೊಕೊ'ಗೆ ಕರೆ
ವಿಶಾಖಪಟ್ಟಣಂ ಉಕ್ಕಿನ ಸಂರಕ್ಷಣಾ ಹೋರಾಟ ಸಮಿತಿ (ವಿಎಸ್‌ಸಿಎಸ್‌ಸಿ) ಈಗ ಶುಕ್ರವಾರ ರಾಜ್ಯಾದ್ಯಂತ 'ರಾಸ್ತಾ ರೊಕೊ'ಗೆ ಕರೆ ನೀಡಿದೆ. ವಿಶಾಖಪಟ್ಟಣಂ ಉಕ್ಕಿನ ಖಾಸಗೀಕರಣದ ವಿಷಯದಲ್ಲಿ ಕೇಂದ್ರವು ಪ್ರಚೋದನಕಾರಿ ರೀತಿಯಲ್ಲಿ ವರ್ತಿಸುತ್ತಿರುವುದು ಅತಿರೇಕದ ಸಂಗತಿಯಾಗಿದೆ. ಖಾಸಗೀಕರಣದ ವಿಷಯವು ಸುಳ್ಳು ಎಂದು ಹೇಳುವ ಬಿಜೆಪಿ ನಾಯಕರು ತಮ್ಮ ಕೆಲಸವನ್ನು ಮುಂದುವರಿಸಿದ್ದಾರೆ ಎಂದು ಹೋರಾಟ ಸಮಿತಿ ಆರೋಪಿಸಿದೆ.
ರಾಸ್ತಾ ರೊಕೊ ಅಭಿಯಾನದ ವೇಳೆ ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ರಸ್ತೆತಡೆ ನಡೆಸಲಿದ್ದಾರೆ.