ಜಮ್ಮು ಮತ್ತು ಕಾಶ್ಮೀರ : ರಾಜಧಾನಿ ಜಮ್ಮುವಿನಲ್ಲಿ ನಿರಾಶ್ರಿತ ಕಾಶ್ಮೀರಿ ಪಂಡಿತರು ಪುನರ್ವಸತಿ ಕಲ್ಪಿಸುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ. 1989ರಲ್ಲಿ ಕಾಶ್ಮೀರದ ಕಣಿವೆಯಲ್ಲಿ ಪ್ರತ್ಯೇಕತಾವಾದಿಗಳು ಬಂದೂಕು ಹಿಡಿದು ಸರ್ಕಾರದ ವಿರುದ್ಧ ಕಾರ್ಯಾಚರಣೆ ನಡೆಸಿದಾಗ ಕಾಶ್ಮೀರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾಶ್ಮೀರಿ ಪಂಡಿತರು ವಲಸೆ ಬಂದಿದ್ದರು.
ಸರ್ಕಾರವು ಈ ಪಂಡಿತರಿಗೆ ಉಧಂಪುರ ಮತ್ತು ಜಮ್ಮುವಿನಲ್ಲಿ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಿತ್ತು. ಅದಲ್ಲದೇ ಇತರ ಅನೇಕ ಪಂಡಿತರು ದೇಶದ ವಿವಿಧ ನಗರಗಳಿಗೆ ವಲಸೆ ಹೋಗಿದ್ದರು.