ಕರ್ನಾಟಕ

karnataka

ETV Bharat / bharat

ದೆಹಲಿಯಲ್ಲೂ ಕೊರೊನಾ ಸ್ಫೋಟ: ಇಂದಿನಿಂದಲೇ ನೈಟ್​ ಕರ್ಫ್ಯೂ ಜಾರಿ - ಮಹಾಮಾರಿ ಕೊರೊನಾ 2ನೇ ಅಲೆ

ಮಹಾಮಾರಿ ಕೊರೊನಾ 2ನೇ ಅಲೆ ಜೋರಾಗಿ ಬೀಸಲು ಶುರುಮಾಡಿರುವುದರಿಂದ ದೆಹಲಿಯಲ್ಲೂ ಇಂದಿನಿಂದಲೇ ಜಾರಿಗೊಳ್ಳುವಂತೆ ನೈಟ್​ ಕರ್ಫ್ಯೂ ವಿಧಿಸಲಾಗಿದೆ.

night curfew in Delhi
night curfew in Delhi

By

Published : Apr 6, 2021, 3:25 PM IST

ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ಅಲ್ಲಿನ ಸರ್ಕಾರ ನೈಟ್​ ಕರ್ಫ್ಯೂ ಜಾರಿಗೊಳಿಸಿ ಮಹತ್ವದ ಆದೇಶ ಹೊರಡಿಸಲಾಗಿದ್ದು, ರಾತ್ರಿ 10ರಿಂದ ಬೆಳಗ್ಗೆ 5ರವರೆಗೆ ಈ ಕರ್ಫ್ಯೂ ಜಾರಿಯಲ್ಲಿರಲಿದೆ.

ಏಪ್ರಿಲ್​ 30ರವರೆಗೆ ಈ ನಿಯಮ ಜಾರಿಗೊಳ್ಳಲಿದ್ದು, ಇಂದು ರಾತ್ರಿಯಿಂದಲೇ ಕಾನೂನು ಜಾರಿಗೊಳ್ಳಲಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಮಾಹಿತಿ ನೀಡಿದ್ದಾರೆ. ಕಳೆದ ಕೆಲ ದಿನಗಳಿಂದ ದೆಹಲಿಯಲ್ಲಿ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗಿ ಕಂಡು ಬರುತ್ತಿದ್ದು, ನಿನ್ನೆ ದಾಖಲೆಯ 3,548 ಕೇಸ್​ಗಳು ಕಾಣಿಸಿಕೊಂಡಿದ್ದು, 15 ಜನರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಬಂಗಾಳದಲ್ಲಿ ನಿಲ್ಲದ ಹಿಂಸೆ: ಇಂದು ಮತ್ತೊಬ್ಬ ಬಿಜೆಪಿ ಕಾರ್ಯಕರ್ತ ಶವವಾಗಿ ಪತ್ತೆ

ನೈಟ್​ ಕರ್ಫ್ಯೂ ವೇಳೆ ಟ್ರಾಫಿಕ್​​ ಸಂಚಾರಕ್ಕೆ ಯಾವುದೇ ರೀತಿಯ ನಿಷೇಧ ಇರುವುದಿಲ್ಲ. ಔಷಧ ತೆಗೆದುಕೊಂಡು ಬರುವವರಿಗೆ ಇ-ಪಾಸ್ ಮೂಲಕ ಅವಕಾಶ ನೀಡಲಾಗುವುದು ಎಂದು ತಿಳಿಸಲಾಗಿದೆ.

ಮೂಲಭೂತ ಅವಶ್ಯಕ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದ್ದು, ಅವುಗಳ ಖರೀದಿ ಮಾಡಲು ಮನೆಯಿಂದ ಹೊರಹೋಗಬೇಕಾದರೆ ಪಾಸ್​ ಅವಶ್ಯವಾಗಿ ಪಡೆದುಕೊಂಡಿರಬೇಕು. ವರದಿಗಾರರು, ಖಾಸಗಿ ಆಸ್ಪತ್ರೆ ವೈದ್ಯರು, ನರ್ಸ್​ ಹಾಗೂ ಇತರ ಮೆಡಿಕಲ್​ ಸ್ಟಾಪ್​ಗಳು ಐಡಿ ಕಾರ್ಡ್​ ಮೂಲಕ ಅಗತ್ಯ ಸ್ಥಳಗಳಿಗೆ ಹೋಗಲು ಅವಕಾಶ ನೀಡಲಾಗಿದೆ. ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ಈಗಾಗಲೇ ಮಹಾರಾಷ್ಟ್ರ ಹಾಗೂ ರಾಜಸ್ಥಾನದಲ್ಲಿ ನೈಟ್​ ಕರ್ಫ್ಯೂ ವಿಧಿಸಲಾಗಿದ್ದು, ಮಹಾರಾಷ್ಟ್ರದಲ್ಲಿ ಶನಿವಾರ - ಭಾನುವಾರ ಲಾಕ್​ಡೌನ್​ ಸಹ ಹೇರಲಾಗಿದೆ.

ABOUT THE AUTHOR

...view details